ಮೈಯ ತಿರುವುಗಳಲಿ ಮಧುರ ಗುನುಗು…

ಶಾಂತಿ ಕೆ ಅಪ್ಪಣ್ಣ 

she pencil sketchನಾದವಿರದ ನನ್ನ ಬದುಕಿಗೆ
ಹೊಸ ಉನ್ಮಾದವನೇ ತಂದವನು ನೀನು…
ನಿನ್ನ ಕೈಯೊಳಗಿನ ತಾನ ನಾನು..

ನಿನ್ನ ನೆನಪಲ್ಲೊಮ್ಮೆ ಮೈ ಮುರಿದರೂ..
ಮೈಯ ತಿರುವುಗಳಲಿ ಮಧುರ ಗುನುಗು…
ಕಿವಿಯಾನಿಸು ದೊರೆಯೇ…ಕೇಳಬಹುದು ನಿನಗೂ ..

shirts

 

 

 

 

 

ಈ ಹೃದಯ ಮಧುಪಾತ್ರೆಯೇ ಹೌದಾದರೆ ..
ಅದೀಗ ತುಂಬಿದೆ.
ನಿನ್ನ ತುಟಿಗಳಿಗಾಗಿ ಮಾತ್ರವೇ ತವಕಿಸುತ್ತಿರುವ
ಈ ನಿಷ್ಕಳಂಕ ಮದಿರೆಗಾಗಿ
ನಿನ್ನ ದಾಹವನು ಮೀಸಲಿಡು ಗೆಳೆಯ.

 

she pencil sketch1ಹುಡುಗ ಒಳ್ಳೆಯವನು…
ಎಲ್ಲಿಂದ ಕರೆದೊಯ್ದನೋ
ಮತ್ತೆ ಅಲ್ಲೇ ತಂದು ನಿಲ್ಲಿಸಿ ಹೋಗಿದ್ದಾನೆ …
ಮತ್ತೇನಿಲ್ಲ..
ಇನ್ನೂ ಬಹಳಷ್ಟು ನಡೆಯಬೇಕಿದೆ..
ಆದರೆ ಈ ಬಾರಿ
ಅವನ ವಿರಹದ ಭಾರವನೂ
ಹೊರಬೇಕಿದೆ…

shirts

 

 

 

 

 

 

ದೊರೆ,
ನೀ ಜೊತೆಗಿರದ ಈ ಸಂಜೆ..

ಹೋಳಿಯಾಡಿದ ಅಂಗಳದಲಿ..
ಬಣ್ಣ ಮೆತ್ತಿದ ಹೆಜ್ಜೆಗಳು ..
ಸುಖದ ಗುರುತುಗಳಂತೆ ಕಂಡವು..

ಅಂಗಡಿಯ ಕಪಾಟಿನಲಿ
ಬಿಕರಿಯಾಗದೇ ಉಳಿದ ಬಣ್ಣಗಳು..
ನನ್ನ ಕನಸುಗಳಂತೆ ಕಂಡವು…

shirts

 

 

 

 

 

ನಿನ್ನದೇ ಬಣ್ಣ..ತೊಟ್ಟಿದ್ದೇನೆ ದೊರೆಯೇ…
ಹೊಸತಾಗಿ ಮತ್ತೇನು ಉಡಲಿ…
ಕಣ್ಣಿನೊಳಗೆ ಇಳಿದ ಬಣ್ಣ…
ಮಣ್ಣ ಕಂಪಿನಲಿ ಇಣುಕಿದೆ…
ಒಡಲ ಒಳಹೊರಗೆ..ಹೂಬಳ್ಳಿ..ಹಬ್ಬಿ..
ಕನಸುಗಳ ತಬ್ಬಿದೆ..

shirts

 

 

 

 

 

ಭೂಮಿಯ ಬಯಕೆಗೆ ಒಲಿಯದ ಮುಗಿಲು …
ಸಂಜೆಯ ಕೊನೆಗಂಟಿದ ಕತ್ತಲಿನ ನೆರಳು…
ಕಡೆವರೆಗೂ ಯಾವುದೋ ಒಂದು ಉಸಿರ ಹಂಗಿನಲಿ ಉಳಿವ ಕೊಳಲು…
ನಿನ್ನಡೆಗೆ ಚಾಚಿಕೊಂಡೂ
ಮುಟ್ಟಲಾರದೆ ಉಳಿದಿರುವ ಈ ನತದೃಷ್ಟ ಬೆರಳು…
ಬಿಡಿ ಚಿತ್ರಗಳಂತೆ ಕಂಡರೂ…
ದೊರೆಯೇ…
ಇಲ್ಲಿ ತೂಗುತಿರುವ ವಿರಹದ ಬಣ್ಣ ಒಂದೇ.

‍ಲೇಖಕರು admin

November 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. sheshagririjodidar

    ಅಂಗಡಿಯ ಕಪಾಟಿನಲಿ
    ಬಿಕರಿಯಾಗದೇ ಉಳಿದ ಬಣ್ಣಗಳು..
    ನನ್ನ ಕನಸುಗಳಂತೆ A beautiful rendering a devotional romance and love….too good…

    ಪ್ರತಿಕ್ರಿಯೆ
  2. nagraj harapanahalli

    ತುಂಬಾ ತಡವಾಗಿ ಈ ಕವಿತೆ ಗಮನಿಸಿದೆ. ಕವಿತೆಯ ಗುಟ್ಟು ಕವಿತೆಗೆ ಮಾತ್ರ ಗೊತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: