ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈನೆರೆದ ಸಂತಾಪವೆ ಕೇಳು..

ಅಂತಃಕರಣದ ಗೆಳತಿಗೆ

ಆರನಕಟ್ಟೆ ರಂಗನಾಥ


ಎದೆಯ ಅಚ್ಚಿನಲ್ಲಿ
ರಕ್ತ ರಹಿತ ಪದಗಳ ಮುದ್ರಿಸಿಕೊಂಡು
ದಿಬ್ಬಣದ ದಾರಿಯಲ್ಲಿ ಕಾದಿರುವ ಕಣ್ಣೀರ
ನಿರಾಕರಿಸಿ ಬಲಿತಿರುವ ನೋವಿಗೆ
ಮರು ಮಾತು ಆಡದಿರುವ ಗಳಿಗೆ
ನಿನ್ನ ದಯೆಯಿಂದ
ನೋವು ಕೂಡ ಕಾವ್ಯದ ಪಟ್ಟ ಹೊತ್ತಿದೆ

 

ಜೀವವು ಚೇತನದ ಸುಳಿವಿರದೆ
ಪರಾವಲಂಬಿಯಾಗಿ ಜೋತು ಬಿದ್ದಿದೆ
ಕರುಳು ಕಡಿಯದ ಕಂದನ ಹಾಗೆ


ಅನುಗಾಲವು ಆತುಕೊಂಡಿರುವ ಮೌನವೆ
ಕೊರಳ ದನಿಯೆಂದು ಹಾಡಿರಲು
ಆಣೆಗಳ ಆಣತಿಯಲ್ಲಿ ಉಸಿರಿಡಿದು
ತುಟಿ ತುಂಬಿ ನಿಂತಿರುವ ಸೊಲ್ಲಿಗೆ
ಒಂದಾದರು ಮಾತು ಕೊಡು
ಊರಿಕೊಳ್ಳಲಿ ಎದೆಯೊಳಗೆ


ಮೈನೆರೆದ ಸಂತಾಪವೆ ಕೇಳು
ಅಂಗಳದಲ್ಲಿ ಹುಲುಸಾಗದಿರು
ಹಸಿ ಮನಸ್ಸಿದು
ಸಂತೈಯಿಸಲು ಬಿಡುವಿಲ್ಲ
ಪ್ರೀತಿಗೆ ಋಣದ ಹಂಗಿಲ್ಲ
ಅಂತಃಕರಣದವಳೆ  ನಿನ್ನ ದಯೆಯಿಂದ
ಕಾವು ಕೂಡ ಕಾವ್ಯದ ಪಟ್ಟ ಹೊತ್ತಿದೆ

 

‍ಲೇಖಕರು admin

13 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading