ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಥುನವ ಮುತ್ತಿಕೊಂಡ ಮೌನ ಬಿಸಿಯುಸಿರಿಗೆ ಮಾತು ಕಲಿಸಿದೆ…

ಮುನಿಸಿಕೊಂಡ ಮೇಲೂ…

ಹೆಚ್  ಕೆ ಶರತ್

ಮೈಥುನವ ಮುತ್ತಿಕೊಂಡ ಮೌನ 
ಬಿಸಿಯುಸಿರಿಗೆ ಮಾತು ಕಲಿಸಿದೆ
 
ಕತ್ತಲೆದುರು ಬೆತ್ತಲಾದ ದೇಹ
ಬೆಳಕಿನ ಕಣ್ಣಿಗೆ ಬಟ್ಟೆ ತೊಡಿಸಿದೆ
 
ನದಿಯ ಮೋಹಕೆ ಮರುಳಾದ ಮಣ್ಣು
ನೆಲದ ಮಮತೆಗೆ ಬೆನ್ನು ತೋರಿದೆ
 
ಯಾವ ನಂಟಿಗೂ ಗಂಟು ಬೀಳದ ಮನಸು
ನಿನ್ನ ಕನಸಿನ ಹೊಸ ಕವಲಾಗಿ ಚಿಗುರಿದೆ
 
ಆಸೆಯ ದಿರಿಸಿಗೆ
ವಾಸ್ತವವ ಹೊದಿಸಿದೆ
 
ಬಯಕೆಯ ಮಾಲೆಗೆ
ಭ್ರಮೆಗಳ ಪೋಣಿಸಿದೆ
 
ಎಲ್ಲೋ ಹುಟ್ಟಿದ ಕನವರಿಕೆಗೆ
ನನ್ನಲ್ಲೇ ಜಾಗ ನೀಡಿದೆ
 
ತೊರೆಯುವ ಮುನ್ನ
ತೆರೆದಿಡುವೆ ನನ್ನೊಳಗಿನ ಒಳ್ಳೆಯವನನ್ನ
 
ಮಾತಿಗೆ ಸಿಗು
ಮುನಿಸಿಕೊಂಡ ಮೇಲೂ

‍ಲೇಖಕರು avadhi

28 July, 2013

4 Comments

  1. Kajooru sathish

    Nice poem..

  2. mmshaik

    uttama kavite..

  3. Anonymous

    superb…..

  4. chalam

    nice…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading