ರಾಜು ಹೆಗಡೆ
ಮನೆ ಮಾಳಿಗೆಯ ಮೇಲೆ
ಎರಡು ರೂಮಿದೆ
ಒಂದರಲ್ಲಿ ನಾನು
ಓದುವ,ಒದಿದ,ಓದದ
ಪುಸ್ತಕಗಳಿವೆ
ಪೆನ್ನು,ಕಾಗದಗಳಿವೆ
ಮತ್ತ್ತೊಂದರಲ್ಲಿ
ಕಂಪ್ಯೂಟರ ಅಂತರಜಾಲದಲ್ಲಿ
ಎಲ್ಲಿಗೆ ಬೇಕಾದರೂ ಹೋಗಬಹುದು
ಕೆಳಗೆ
ಅಡಿಗೆ
ಮನೆ,ಮಲಗುವ ಕೋಣೆ,ಬಚ್ಚಲು,ಟಿ,ವಿ.
ಹಿತ್ತಲಲಿ ಬಸಲೆ, ಬಾಳೆ ಇತ್ಯಾದಿ
ಹಸಿವಾದಾಗ
ಕೆಳಗೆ ಹೋಗುತ್ತೇನೆ
ತುಂಬಿದಾಗ
ಮೇಲೆ ಬರುತ್ತೇನೆ
ಮೇಲೆ ಬಂದಾಗ
ಕೆಳಗೆ ಹೋಗುವಾ ಅನಿಸುತ್ತದೆ
ಕೆಳಗೆ ಇದ್ದಾಗ
ಮೇಲೆ ಹೋಗುವಾ ಅನಿಸುತ್ತದೆ
ಹೀಗಾಗಿ
ಇಡೀ ದಿನ ನಾನು
ಮೇಲೆ ಕೆಳಗೆ ಕೆಳಗೆ ಮೇಲೆ
ಓಡಾಡಿ ಓಡಾಡಿ ಸುಸ್ತಾಗಿ
ಈಗ
ಏಣಿಯ ಮೇಲೆ ಕೂತಿದ್ದೇನೆ!








0 Comments