ಮೂಲ: ಬಹಾದ್ದೂರ್ ಷಾ ಜಫರ್

ಕನ್ನಡಕ್ಕೆ : ಮೆಹಬೂಬಿ
ನೋವಿನ ಬಿರುಗಾಳಿ ಬೀಸಿದರೆ ಸಿಂಗರಿಸಿಕೊಳ್ಳುವೆ…
ನಾ ನಿನ್ನ ಕೇಶವೆಂದುಕೋಬೇಡ ಹರಡಿಬಿಡುವೆ…
ಕೇಳಬೇಡ ನನ್ನಿಂದ ಅಗಲಿದರೆ ಎಲ್ಲಿಗೆ ಹೋಗುವೆ..
ನಾನು ನದಿ ಸಮುದ್ರದೊಂದಿಗೆ ಸೇರಿಹೋಗುವೆ…
ಆಗದು ನಾವಿಕನೇ ನನ್ನಿಂದ ನಿನ್ನ ಆರೈಕೆ
ನಾನು ಆ ಸ್ವಾಭಿಮಾನಿ ದೋಣಿಯಿಂದ ಇಳಿದುಬಿಡುವೆ…
ನನಗೆ ಗಲ್ಲಿಗೇರಿಸುವ ಜರೂರತ್ತೇನಿದೆ
ನನ್ನ ಕೈಯಿಂದ ಲೆಕ್ಕಣಿಕೆ ಕಸಿದುಕೊಳ್ಳಿ ಸತ್ತು ಹೋಗುವೆ…
ನನಗೆ ಈ ಜಗತ್ತಿನಿಂದ ಅಳಿಸುವರಾರು ಜಫರ್
ನಾನು ಕವಿ ಪುಸ್ತಕಗಳಲಿ ಚದುರಿಬಿಡುವೆ….






ಚಂದದ ಕವಿತೆ