ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೃಗೀಯ ಕೃತ್ಯವಲ್ಲವೇನೋ ಇದು…..

ಹೀಗೊಮ್ಮೆ ಇಲ್ಲೆ..

–  ಸಂವರ್ಥ ’ಸಾಹಿಲ್’

ಮೃಗೀಯ ಕೃತ್ಯವಲ್ಲವೇನೋ ಇದು

ಬಹುಶಃ ಸಾಮಾನ್ಯ ಸಂಗತಿ ಆಗಿರಬೇಕು

ಮೃಗೀಯವಾಗಿದ್ದಲ್ಲಿ

ಯಾವುದೋ ರಾಮನ ಉರಿಯುವ ಬಾಣ

ಎದೆ ಸೀಳಿ ಸಂಹರಿಸುತಿತ್ತು

ರಾಕ್ಷಸ ದೊರೆಯ

ಹೊತ್ತಿ ಉರಿಯುತ್ತಿತ್ತು ಲಂಕಾ ನಗರಿ

ಉರಿ ಬೆಂಕಿಯ

ವಶಕ್ಕೆ ಬಾಗುತಿತ್ತು.

.

ಮೃಗೀಯವಾಗಿದ್ದರೆ

ಮಹಾಭಾರತದ ಕುರುಕ್ಷೇತ್ರ ತಾಂಡವವಾಡುತಿತ್ತು

ಶತಶತಮಾನಗಳ ತನಕ ನೆಲದ ಬಣ್ಣ ಕೆಂಪಾಗುತಿತ್ತು

ಸುಡುವಗ್ನಿ ಆಕಾಶದುದ್ದಗಲವ ಆವರಿಸುತಿತ್ತು.

.

ಮೃಗೀಯ ಕೃತ್ಯವಲ್ಲವೇನೋ ಇದು

ಬಹುಶಃ ಸಾಮಾನ್ಯ ಸಂಗತಿ ಆಗಿರಬೇಕು.

 

ಪಂಜಾಬಿ ಮೂಲ: ಧೀರ್

(1978ನೆ ಇಸವಿಯಲ್ಲಿ ಪ್ರಿತಂ ಕೌರ್ ಎಂಬ ಹರಿಜನ ಹೆಣ್ಣುಮಗಳ ಜನನಾಂಗದೊಳಕ್ಕೆ 22 ಇಂಚಿನ ಕಟ್ಟಿಗೆ ನೂಕಿ ಹತ್ಯೆಗೈದ ಸಂದರ್ಭದಲ್ಲಿ ಬರೆದ ಕವಿತೆ )

 

‍ಲೇಖಕರು G

17 December, 2012

5 Comments

  1. chalam

    saamanya sangathi……!nijakkoo mana kalakuva gatanegalu saamanya annisibiduthiruvudu hedarike huttisuthade.nimma novoo samaanyavaguva apayadalliddeve..saahil…intha vishaya kandisuvudara jathe naviddeve.

  2. Mohan V Kollegal

    ಮೃಗೀಯ ಕೃತ್ಯವಲ್ಲವೇನೋ ಇದು
    ಬಹುಶಃ ಸಾಮಾನ್ಯ ಸಂಗತಿ ಆಗಿರಬೇಕು – ಇವು ಪರಿಣಾಮಕಾರಿಯಾಗಿ ನೋವನ್ನು ಹೇಳುವ ಸಾಲುಗಳು. ಕಾಯುವ ಶಿವ ಕಾಲು ಮುರಿದುಕೊಳ್ಳುವಾಗ ಎಲ್ಲಿದ್ದ ಎಂಬಂತೆ. ಕವಿತೆ ಮತ್ತು ಕಾರಣವಾದ ಘಟನೆ ನಿಜಕ್ಕೂ ಹೃದಯ ವಿದ್ರಾವಕ… ಆ ಹೆಣ್ಣುಮಗಳನ್ನು ಆ ರೀತಿ ನಡೆಸಿಕೊಂಡವರು ಮನುಷ್ಯರಲ್ಲ, ಈ ಭೂಮಿಯ ಮೇಲಿರಲು ಅರ್ಹರಲ್ಲ…

  3. ಹರಿ

    ಹೌದು…ಇದು ಮೃಗೀಯ ಕೃತ್ಯ ಅಲ್ಲವೇ ಅಲ್ಲ….ಮೃಗಗಳಾದರೋ ಹಸಿವೆಗೆ-ಬದುಕಿಗೆ ಹೋರಾಡುತ್ತವೆ. ಅದು ನಿಸರ್ಗ ನಿಯಮ.
    ಇದು..”ನಾಗರೀಕ ಸಮಾಜ”…ಅದರಲ್ಲೂ ಎಲ್ಲೂ ಕಾಣಸಿಗದಂತ ನಾಗರೀಕ ಜನಸಾಮಾನ್ಯರ-ನಾಗರೀಕ ಜನನಾಯಕರ ಭಾರತ…
    ನನಗೆ-ನಮಗೆಲ್ಲಾ ಒಂದು ಧಿಕ್ಕಾರವಿರಲಿ…

  4. D.Ravivarma

    ತೀವ್ರವಾಗಿ ಮನಕಲಕುವ ವಿಶಾದನಿಯ ಸತ್ಯ…ನಾಗರಿಕತೆಯ ಮುಕಕ್ಕೆ ಮಸಿಬಲಿದು ಕೊಳ್ಳುವ ಧಾರುಣ ಘಟನೆ ಇದು…..ಇಲ್ಲಿ ಈ ನಾಡಲ್ಲಿ ಇನ್ನು ಈ ತರಹದ ಪೈಶಾಚಿ ಕೃತಿಗಳು ನಡೆಯುತ್ತಲೇ ಇವೆ.. ಕೆಲವು ಮಾತ್ರ ಗಮನಕ್ಕೆ ಬರುತ್ತಿವೆ… ಇನ್ನು ಹಲವು ಇತಿಹಾಸದ ಒಡಲಲ್ಲಿ ಮುಚ್ಚಿ ಹೋಗುತ್ತಿವೆ…. ನಿಮ್ಮ ಚಿಂತಂಗೆ,ಮಾನವೀಯ ಕಳಕಳಿಗೆ ಪ್ರೀತಿಪುರ್ವಕ ಶರಣು…..

    • D.Ravivarma

      paishachi krutyagalu….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading