ಮೂರ್ತಿಯಾಗೂ ಕಾಡುತ್ತಾರೆ ಸಿಜಿಕೆ

ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಸಿಜಿಕೆಯವರ ಮೂರ್ತಿಯೊಂದು ಹೈಲೈಟ್


– ಶಿವು ಮೊರಿಗೇರಿ
ಈ ಮೂರ್ತಿಯನ್ನು ನೋಡಿದ ತಕ್ಷಣ ಕಾಡಿದ ಪ್ರಶ್ನೆಗಳಿಗೆ ಮೂರ್ತಿ ತಯಾರಕರಲ್ಲೊಬ್ಬರಾದ ಎಂ.ರವಿಯವರು ಉತ್ತರಿಸಿದ್ದು ಹೀಗೆ.
ಮೂರ್ತಿ ತಯಾರಿಸಿದ್ದು ಯಾವಾಗ ?
ಸಿ.ಜಿ.ಕೆ.ರಾಷ್ಟ್ರೀಯ ರಂಗೋತ್ಸದ ಹಬ್ಬಕ್ಕಾಗಿಯೇ ಸಿದ್ಧಗೊಳಿಸಿದ ಮೂರ್ತಿ ಇದು.
ಸಹಾಯಕರುಗಳ ವಿವರ ತಿಳಿಸುತ್ತೀರಾ ?
ತಪನ್ ಕಲಾವಿದರ ತಂಡವೇ ಶ್ರಮಿಸಿದೆ. ಅಪ್ಪಯ್ಯ, ಶ್ರೀಧರ್ ಅಡಪ್ಪ ಮತ್ತು ನಾನು ಮೂರೂ ಕಲಾವಿದರು ಸೇರಿ ಮೂರ್ತಿ ತಯಾರಿಸಿದ್ದು.
ಮೂರ್ತಿ ನಿರ್ಮಿಸಲು ತೆಗೆದುಕೊಂಡ ಸಮಯ ಎಷ್ಟು ?
ತಿಂಗಳಿಗಿಂತ ಜಾಸ್ತಿ ದಿನಗಳನ್ನು ಮೂರ್ತಿ ತಯಾರಿಗಾಗಿ ಸಮಯ ತೆಗೆದುಕೊಂಡಿದ್ದೇವೆ.
ಇದಕ್ಕೂ ಮುಂಚೆ ಎಷ್ಟು ಮೂರ್ತಿ ಮಾಡಿದ್ದೀರಿ ?
ಯಾವುದೂ ಇಲ್ಲ. ಸಿ.ಜಿ.ಕೆ.ಯವರ ಮೂರ್ತಿ ತಯಾರಿಸಿದ್ದೇ ಮೊದಲು. ಆ ಕುರಿತು ಹೆಮ್ಮೆ ಇದೆ ನನಗೆ.
ಸಿ.ಜಿ.ಕೆ.ಯವರ ಮೂರ್ತಿಯನ್ನು ಇದೇ ಭಂಗಿಯಲ್ಲೇಕೆ ನಿರ್ಮಿಸಿದ್ದೀರಿ ?
ಇದು ಅವರು ‘ಸಂಸ’ ಬಯಲು ರಂಗಮಂದಿರದಲ್ಲಿ ಕೂಡುತ್ತಿದ್ದ ಭಂಗಿ. ಹಾಗಾಗಿ ಅದೇ ಭಂಗಿಯಲ್ಲಿ ಮೂರ್ತಿ ನಿರ್ಮಿಸಿದ್ದೇವೆ.
ರಂಗೋತ್ಸವ ನಡೆಯುತ್ತಿರುವ ಈ ಸಂದರ್ಭದಲ್ಲಿ ಮೂರ್ತಿ ಕುರಿತು ನಿಮ್ಮ ಅಭಿಪ್ರಾಯ ?
ಖುಷಿಯಾಗುತ್ತೆ. ಕಾರ್ಯಕ್ರಮಕ್ಕೆ ಹೋಗುವ ಮೊದಲೇ ಪ್ರತಿಯೊಬ್ಬರಿಗೂ ಈ ಮೂರ್ತಿಯ ದರ್ಶನವಾಗುತ್ತೆ. ಆ ಮೂರ್ತಿಯ ಕಡೆ ತಿರುಗಿ ನೋಡಿದಾಗ ಧನ್ಯತಾ ಭಾವ ಮೂಡುತ್ತೆ.
ಮೂರ್ತಿ ರಚನೆಯ ಪ್ರಕ್ರಿಯೆಗಳನ್ನು ತಿಳಿಸುತ್ತೀರಾ ?
ಸಿ.ಜಿ.ಕೆ.ಯವರ ಇನ್ನೊಂದು ಮೂರ್ತಿ ಸಾಣೇಹಳ್ಳಿಯಲ್ಲಿದೆ. ಅವರದೇ ಹೆಸರಿನಲ್ಲಿ ರಂಗೋತ್ಸವ ನಡೆಯುತ್ತಿರುವಾಗ ಒಂದು ಮೂರ್ತಿ ನಿರ್ಮಿಸುವ ಕುರಿತು ತುಂಬಾ ಜಾಗರೂಕತೆ ಮತ್ತು ಅಭಿಮಾನದಿಂದ ತಫನ್ ಕಲಾ ತಂಡ ಶ್ರಮಿಸಿದೆ.
ಮೂರ್ತಿ ಅನಾವರಣಗೊಂಡ ತಕ್ಷಣದ ನೆರೆದವರ ಪ್ರತಿಕ್ರಿಯೆ ಹೇಗಿತ್ತು ?
ಅದೊಂದು ಅದ್ಭುತವಾದ ಘಳಿಗೆ…..!
ಈ ಮೂರ್ತಿಯನ್ನು ನೋಡಿದ ಸಭಿಕರಲ್ಲಾರಾದರೂ ಈ ಮೂರ್ತಿ ನಿರ್ಮಿಸಿದವರಾರೆಂದು ಕೇಳಿದ್ದಾರಾ ?
ತುಂಬಾ ಜನ ಕೇಳಿದ್ದಾರೆ. ಅವರು ಹಾಗೆ ಕೇಳುತ್ತಿರುವಾಗ ನಮಗೆ ತುಂಬಾ ಸಾರ್ಥಕ ಭಾವನೆ ಮೂಡಿದೆ.

ಸಂಸ ದಲ್ಲಿರುವ ಸಿಜಿಕೆ ಮೂರ್ತಿ :




‍ಲೇಖಕರು avadhi

January 17, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. D.Ravivarma

    ಈ ರಂಗಕರ್ಮಿ ಸಿ,ಜಿ ಕೆ ಗೊಂದು ಹೃದಯದಾಳದ ರಂಗನಮನ ..ಽವರ ಮೂರ್ತಿ ಯನ್ನು ಅದ್ಬುತವಾಗಿ ಸೃಷ್ಟಿಸಿದ ಎಲ್ಲ ಕ್ರಿಯಾಶೀಲ ಮನಸ್ಸುಗಳಿಗೂ ವಂದನೆ ಅಭಿನಂದನೆ…

    ಪ್ರತಿಕ್ರಿಯೆ
  2. Swarna

    ಮೂರ್ತಿ ತುಂಬಾ ಚೆನ್ನಾಗಿದೆ. ನಿರ್ಮಿಸಿದವರಿಗೆ ಅಭಿವಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: