ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂಕಜ್ಜಿ ಕಂಡ 'ಸತ್ಯಗಳು'..

ಪಿ ಶೇಷಾದ್ರಿ ನಿರ್ದೇಶನದ, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಚಿತ್ರದ ಬಗ್ಗೆ ಪ್ರೊ ಸಿ ಎನ್ ಆರ್ ಅವರು ವಿವರವಾದ ನೋಟವನ್ನು ಹರಿಸಿದ್ದರು. ಇದರಲ್ಲಿ ಒಂದು ಚಿತ್ರ ಮೂಲ ಕೃತಿಗೆ ನಿಷ್ಠವಾಗಿರಬೇಕೇ ಬೇಡವೇ? ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದರು.
ಇದಕ್ಕೆ ಜೋಗಿ ಪ್ರತಿಕ್ರಿಯಿಸಿದ್ದರು. ಅದು ಇಲ್ಲಿದೆ 
ಈ ಪ್ರತಿಕ್ರಿಯೆಗೆ ಪ್ರೊ ಸಿ ಎನ್ ಆರ್ ಕೊಟ್ಟ ಉತ್ತರ ಇಲ್ಲಿದೆ
‘ಅವಧಿ’ ಓದುಗರಾದ ಪಲ್ಲವಿ ಹೆಗಡೆ ಅವರ ಅನಿಸಿಕೆ ಇಲ್ಲಿದೆ-
ಬಿ ಸುರೇಶ್ ಈಗ ಬರೆದಿದ್ದಾರೆ
ಈ ಚರ್ಚೆಯಲ್ಲಿ ನೀವೂ ಭಾಗವಹಿಸಬಹುದು
avadhimag@gmail.com ಗೆ ನಿಮ್ಮ ಅನಿಸಿಕೆಯನ್ನುಕಳಿಸಿಕೊಡಿ
ಬಿ ಸುರೇಶ
ಗುರುಗಳಾದ ಸಿಎನ್ನಾರ್ ಅವರಲ್ಲಿ ಸಪ್ರೇಮ ವಂದನೆಗಳು.
ನಾನು ಅನುಭವಿ ಎಂಬುದು ದೊಡ್ಡ ಮಾತು.
ನಾನಿನ್ನೂ ದೃಶ್ಯ ಮಾಧ್ಯಮದ ವಿದ್ಯಾರ್ಥಿ.
ನೀವು ಚರ್ಚಿಸುತ್ತಾ ಇರುವ ಸಿನಿಮಾ ನಾನಿನ್ನೂ ನೋಡಿಲ್ಲ. ಆದರೆ ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು” ನಾನು ಮೆಚ್ಚಿದ ಕಾದಂಬರಿಗಳಲ್ಲಿ ಒಂದು.
ಆ ಕಾದಂಬರಿಯ ಶೀರ್ಷಿಕೆಯಲ್ಲಿ ಬಳಸಿರುವ “ಕನಸು” ಎಂಬ ಪದ ಸರಿಯಲ್ಲ ಎಂದು ಖುದ್ದು ಕಾರಂತರ ಜೊತೆಗೆ ಮಾತಾಡಿದ್ದು ನನಗಿನ್ನೂ ನೆನಪಿದೆ. ಅವರು ‘ಹಳವಂಡ ಎಂಬ ಪದ ಬಳಸಬೇಕಿತ್ತೇನಪ್ಪ?’ ಎಂದು ಕೇಳಿದ್ದರು. ನನಗೆ ಆಗ ಉತ್ತರ ತೋಚಿರಲಿಲ್ಲ. ಈಗಾಗಿದ್ದರೆ ಪ್ರಾಯಶಃ, “ಮೂಕಜ್ಜಿ ಕಂಡ ಸತ್ಯಗಳು” ಎಂದು ಸೂಚಿಸುತ್ತಿದ್ದೆನೇನೋ…
ಅದು ಹಾಗಿರಲಿ.
ಪಿ.ಶೇಷಾದ್ರಿ ಅವರ “ಮೂಕಜ್ಜಿ” ನೋಡಿದ ನಂತರ ನಿಮ್ಮ ದೃಶ್ಯಮಾಧ್ಯಮ ಕುರಿತ ಚಿಂತನೆಗೆ ನನ್ನದಾದ ಒಂದಷ್ಟು ಒಗ್ಗರಣೆ ಖಂಡಿತ ಸೇರಿಸುವೆ.
ನೀವು ಈ ಚಿಂತನೆಯಲ್ಲಿ ಮಂಡಿಸಿರುವ ಮಾತು ಮತ್ತು ಪ್ರಶ್ನೆಗಳು ಬಹುಮುಖ್ಯವಾದವು ಎಂಬುದಂತೂ ಸತ್ಯ.
ಅದಕ್ಕಾಗಿ ಮತ್ತೊಮ್ಮೆ ನಿಮಗೆ ಥ್ಯಾಂಕ್ಸ್, ಗುರುಗಳೇ.
-ಬಿ ಸುರೇಶ್

‍ಲೇಖಕರು avadhi

10 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading