ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುರಿದ ವಸ್ತುಗಳ ಸಾಲಿನಲ್ಲಿ ನಾವು ಇದ್ದೇವೆ..

ಎಂ ಆರ್ ಕಮಲ

i will keep broken things !

ಆಲೀಸ್ ವಾಕರ್ ಬರೆದಿರುವ ನನಗಿಷ್ಟವಾದ ಕವಿತೆಯ ಹೆಸರು ‘i will keep broken things ‘ ಅಂತ. ನಾನೂ ಅದೇ ಸ್ವಭಾವದವಳೇ. ಅದರ ಬಗ್ಗೆ ಮುಂದೊಂದು ಪ್ರಬಂಧ ಬರೆಯುತ್ತೇನೆ. ಎಲ್ಲ ಮುರಿದ, ಹಳೆಯ ವಸ್ತುಗಳನ್ನು ನನ್ನೊಳಗೆ, ಹೊರಗೆ ಜೋಡಿಸಿ ಇಟ್ಟುಕೊಂಡಿದ್ದೇನೆ. ಮತ್ತೆಂದೂ ನಾನವನ್ನು ಅದರ ಸ್ಥಾನದಲ್ಲಿ ಇಡಲಾರೆ ಗೊತ್ತು. ಆದರೂ ಅವು ನನ್ನನ್ನು ರೂಪಿಸಿವೆ.

ನಾನು ಹುಟ್ಟಿ ಬೆಳೆದ, ಬೀಳುತ್ತಿರುವ, ಮುರಿದ ಮನೆಯನ್ನು ನೋಡಿದಾಗ ನನಗೆ ಈ ಕವಿತೆ ನೆನಪಿಗೆ ಬಂತು. ಕವಿತೆಯ ಕೊನೆಯಲ್ಲಿ `I will keep Myself ‘ ಅಂತ ಕವಿ ಹೇಳುತ್ತಾಳೆ. ಆ ಮುರಿದ ವಸ್ತುಗಳ ಸಾಲಿನಲ್ಲಿ ನಾವು ಇದ್ದೇವೆ. ನಮ್ಮದೇ ಅನುಭವ, ನೆನಪುಗಳು! ಸುತ್ತಲಿನ ಜನರು ನಮಗೆ ಅರಿವಿರದಂತೆ ನಮ್ಮನ್ನು ರೂಪಿಸಿದ್ದು ಇವೆಲ್ಲ ಸದ್ಯ ಮುರಿದ ವಸ್ತುಗಳೇ!

ನನ್ನ ಮನೆಯ ಬಗ್ಗೆ ಬಹಳಷ್ಟು ಕವನಗಳನ್ನು ಬರೆದಿದ್ದೇನೆ. ಈ ಚಿತ್ರ ಮುಂದೆ ನಾನು ಬರೆಯಬಹುದಾದ ಪ್ರಬಂಧದ ಬಗ್ಗೆ ಹೇಳಬಲ್ಲದು.

‍ಲೇಖಕರು avadhi

6 February, 2023

1 Comment

  1. T S SHRAVANA KUMARI

    ತುಂಬಾ ಚಂದ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading