ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುನಿಸಿಗೆ ಮಣಿದವರು.. 

ಅವಧಿಯ ಓದುಗ ಪತ್ರಕರ್ತ ರವಿ ಅಜ್ಜೀಪುರ ‘ಒಂದು ಸಣ್ಣ ಮುನಿಸು ಅವಳೆಡೆಗೆ’ ಎನ್ನುವ ನಾಲ್ಕು ಪದ ಕೊಟ್ಟು ‘ಇದು ಕವಿತೆಯಾಗಿ ಬೆಳೆದೀತೆ? ನಿಮ್ಮ ಮನಸಿನೊಳಗೆ’ ಎಂದು ಕೇಳಿದ್ದರು. 

‘ಆಗದೆ ಏನು’ ಎಂದು ಕವಿತೆ ಮಾಡಿದ ಇಬ್ಬರು ಇಲ್ಲಿದ್ದಾರೆ.. 

sudha chidananda gowdaಒಂದು ಸಣ್ಣಮುನಿಸು ಅವಳೆಡೆಗೆ
ನಾನಿನ್ನೂ ಕೊಡುವುದಿತ್ತು ತುತ್ತು ಬೇಡುವುದಿತ್ತು ಅವಳ ಮುತ್ತು
ಬಣ್ಣದ ನೆರಿಗೆಯ ಫ್ರಾಕಿನ ನೆರಳ ಕಾಂತಿಯಲಿ ಜೀನ್ಸ್ ಕಾಯುತ್ತಿತ್ತು
ಕಾಲ ಹಾಲಕೆನೆಯಂತೆ ಉಕ್ಕಿಯೇ ಹೋಯ್ತು
ವಯಸ ಮಾಯಕದ ತೆರೆಗೆ ಅಡ್ಡಹಾಕಲೇ
ನನ್ನ ಹರೆಯದ ಕನಸುಗಳ ಗುಡ್ಡೆ ಹಾಕಲೇ
ಹರಸಬೇಕಿದೆ ಹೆಗಲಾಗಬೇಕಿದೆ ಕನಸುಗಳಿಗೆ
ಮಗಳಿಗೆ ಮಗಳಾಗಿ ಕಂಬನಿಯ ಮಿನುಗಿಸಬೇಕಿದೆ
ಜೊತೆಗೆ ಕಾಲನೆದುರು ನನ್ನ ಕಾಲೂರಿಸಿದ
ಅವಳೆಡೆಗೊಂದಿಷ್ಟು ಮುನಿಸಿದೆ..

-ಸುಧಾ ಚಿದಾನಂದಗೌಡ 

 

Frame on vintage retro background vector illustrationಒಂದು ಸಣ್ಣ ಮುನಿಸು ಅವಳೆಡೆಗೆ
ಮೋಡ ಕಟ್ಟಿಯೂ ಮಳೆ ಸುರಿಸದ ಜಿಡ್ದುತನಕ್ಕೆ,
ಮಳೆ ಸುರಿಸಿಯೂ ಕೊಚ್ಚಿ ನೊಣೆದ ಕೋಪಕ್ಕೆ
ನೊಣೆದರೂ, ಕೊಡಲಿ ಬೀಸಿದ ಪಾಪಿಗಳ
ನೊಣೆಯದೆ , ಅಮಾಯಕರ ನುಂಗಿದ್ದಕ್ಕೆ,
ಅವಳನ್ನೇ ನುಂಗುವ ರಕ್ಕಸ ಮಕ್ಕಳ
ಮೇಲೆ ಇನಿತೂಕರುಣೆ ತೋರದಿದ್ದಕ್ಕೆ ,
ಸಹನೆ ಮಂತ್ರದಲಿ ತನ್ನನ್ನೇ ಬಲಿಯಾಗಿಸಿಕೊಳ್ಳುತ್ತಿರುವುದಕ್ಕೆ
ಒಂದು ಸಣ್ಣ ಮುನಿಸು ಅವಳೆಡೆಗೆ

– ಎಸ್ .ಪಿ. ವಿಜಯಲಕ್ಷ್ಮಿ

‍ಲೇಖಕರು admin

27 November, 2015

3 Comments

  1. ಸುಧಾ ಚಿದಾನಂದಗೌಡ

    oh… thanq avadhi..

    • Anonymous

      Sudhakka lovely poem.tumba ishtavaaytu.

  2. Vijaya lakshmi S.P.

    “chandada spardhe” ittu , nanninda ‘that antha’ kavithe huttisida ” Ravi avarige,
    adannu preetiyinda prakatisida ‘Avadhi’ ge vandanegalu…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading