ಮಂಜುಳಾ ಹುಲಿಕುಂಟೆ
ಫೈನಲಿ…😍 ಮುದ್ದೆ ರೆಡಿ ಆಗೇ ಹೋಯ್ತು..
ಬೆಂಗಳೂರಿಗೆ ಬಂದಾಗ್ಲಿಂದ್ಲು ಮುದ್ದೆ ಅಂದ್ರೆ ಊರಿಗೆ ಹೋಗ್ಬೇಕು.. ಇಲ್ಲಾ ಅಕ್ಕನ ಮನೆಗೆ ಹೋಗ್ಬೇಕು ..
ಮೊದ್ಲೆಲ್ಲಾ ಪಿಜಿ… ಅಲ್ಲಿ ಮುದ್ದೆ ಅಂದ್ರೆ ಏನೂ ಅಂತಾನೇ ಗೊತ್ತಿಲ್ಲ
ಇನ್ನು ರೂಂ ಮಾಡಿ ನಾಲ್ಕು ತಿಂಗಳಾಗ್ತಾ ಬಂದ್ರೂ ಮುದ್ದೆ ಮಾಡೋದಿಕ್ಕೆ ಕೋಲಿಲ್ಲ ಅದಿಲ್ಲ ಇದಿಲ್ಲ ಅಂತಾ ನೋವ್ತಿನ್ತಾ ಇದ್ದೆ
ಆದ್ರೆ ಇವತ್ತು ಆಗಿದ್ದಾಗ್ಲಿ ಅಂತಾ ಸೌಟು, ಕುರ್ಪಿ ಬಳಸಿ ಮುದ್ದೆ ಮಾಡೋದಂತ ಡಿಸೈಡ್ ಮಾಡಿ ಮಾಡಿದ್ರೆ ಅಮ್ಮನ್ನಷ್ಟೇ ಹದ ..
ನಂಗೆ ಮುದ್ದೆ ಮಾಡೋದು ಸಖತ್ ಇಷ್ಟ
ಆ ಘಮ, ಹದ ಒಂದೊಳ್ಳೆ ಕವಿತೆ ಬರ್ದಷ್ಟೇ ಖುಷಿಕೊಡುತ್ತೆ…
ಕೊನೆಗೂ ಏನೊ ಸಾಧಿಸಿದ ಖುಷಿ…😍 😍
ಮುದ್ದೆ, ಟಮೊಟೊ ಗೊಜ್ಜು ಜೊತೆಗೆ ಚಿಕನ್ ಕುರ್ಮ.. ನಾವು ಯಾರ್ಗು ಕಮ್ಮಿ ಇಲ್ಲ.
0 ಪ್ರತಿಕ್ರಿಯೆಗಳು