ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮುಟ್ಟುವುದೆಂದರೆ ಒಂದು ಎಚ್ಚರ…’ – ರೂಪ ಹಾಸನ

ನಿಮೀಲನ

ರೂಪಾ ಹಾಸನ

ಮುಟ್ಟುವುದೆಂದರೆ ಮುಟ್ಟದಿರುವುದು

ಮುಟ್ಟದಿರುವುದೆಂದರೂ ಮುಟ್ಟುವುದು

ಕಣ್ಣಾಗಿ ಕಾದು ಕೂತ

ಮೈಮರೆವಿನ ಎಚ್ಚರದಲಿ

ಎವೆಗಳೊಂದಾಗುವ ಚಡಪಡಿಕೆ

ಮುಟ್ಟಿತಾಗುವ ಮೈಮರೆವು.

ಒಂದಾಗಿಯೂ ಬೇರಾದ

ಎರಡಾಗಿಯೂ ಒಂದಾದ ಕಣ್ಣೆವೆ

ಮೈ ಮರೆವಿನಲ್ಲೂ

ಮೊಗ್ಗುಗಳರಳಿ ಪಸರಿಸಿದ ಗಂಧ

ಒಳಗೇ ಒಳಗಾಗುವ

ಕಾಯದಚ್ಚರಿಗೆ ಕೈ ಮುಗಿದು

ಒಂದು ಇನ್ನೊಂದರೊಳಗಿದ್ದು

ತುಂಬಿಕೊಳುವ ಅಲೆ ಅಲಲೆ

ವಾಚಾಳಿ ಮನಸು

ದಿಟ್ಟಿ ತೆರೆದಿಟ್ಟೇ ನಿದ್ದೆಗಿಳಿಯುತ್ತದೆ

ರೆಪ್ಪೆಯಲುಗುವಿಕೆಗೂ ರೋಮಾಂಚನ.

ನಿಶೆಯೊತ್ತಾಯದ ಕಣ್ಬಾರಕ್ಕೂ

ತೂಕಡಿಸದ ಮನಸು

ಮೈಯೆಲ್ಲಾ ಕಣ್ಣಾದ

ಹೊರ ಎಚ್ಚರದಲ್ಲೂ

ಒಳಗಿನ ಮೈಮರೆವು

ಮುಟ್ಟುವುದೆಂದರೆ ಒಂದು ಎಚ್ಚರ

ಮೈಮರೆವುದೆಂದರೂ ಇನ್ನೊಂದು ಎಚ್ಚರ.

ನಿಮೀಲನಕ್ಕೆ ಒಳಗಿನೆಚ್ಚರ

ಹೊರಗಿನ ಮೈಮರೆವು!

‍ಲೇಖಕರು G

28 September, 2012

2 Comments

  1. Mohan V Kollegal

    ಈಜದಂತೆ ಸೇರುವ
    ಸೇರದಂತೆ ಈಜುವ – ಎಂಬಂತೆ… ಚೆನ್ನಾಗಿದೆ…

  2. mmshaik

    nice one…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading