ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಖವ ತೋರಿಸಲಾರೆ..

ಹೇಮಾ ಸದಾನಂದ್ ಅಮೀನ್, ಮುಂಬೈ

 

ನನ್ನ ಮುಖ ತೋರಿಸಲಾರೆ ಎಂದು

ಲಗುಬಗನೇ ಮೆಟ್ಟಿಲು ಇಳಿಯುತ್ತಿದ್ದವನು ನೇರವಾಗಿ

ಕಣ್ಣರಳಿಸಿ ಸಿನಿಮಾ ನೋಡುತಿದ್ದ ಜೀಯಾಳ

ಎದೆಯನ್ನೇರಿದ ದಕ್ ದಕ್ ಸದ್ದು

 

ಆರು ತಿಂಗಳ ಹಿಂದೆ ಇಷ್ಟೇ ಹಗುರವಾಗಿ

ಹೇಳಿ ಹೋದ ತನ್ನ ಪ್ರೇಮಿಯನ್ನು

ಕಾಡಿ ಬೇಡಿ ನಿಲ್ಲಿಸಿದರು ಹಿಂತಿರುಗಿಯೂ

ನೋಡದವನ ಸಾರ ಕನಸು ಆಸೆ ನೂರು

 

 

ಬದುಕಿನ ಕಲಾಂದಾನಿಯಲ್ಲಿ ಅದ್ದಿ ಬರೆದ

ಪ್ರೇಮ ಪತ್ರದ ತುಂಬೆಲ್ಲಾ ಹಸಿ ನೋವುಗಳು

ಹಸಿ ತುಟಿಯ ಮುದ್ರೆಗಳು..

ಅವನ ಎದೆಯೊಳಗೆ ಶುಷ್ಕ ನೆರಿಗೆಗಳು

 

ಇಲ್ಲಿ ಒಂದೊಂದೇ ಅಕ್ಷರಗಳು  ಬಿಳುಚಿ ಕಳಚಿ

ಬಿದ್ದು ಹೊರಳಿ ಹೊಸ ವಿಳಾಸ ಅಂಟಿಸಿದ

ಮನೆಯ ಶೃಂಗರಿಸಿ ಮತ್ತೊಂದು ಮನೆಯ

ಅಂಗಳವನ್ನು ಅಣಕಿಸುತಿತ್ತು.

 

ಎಲ್ಲರೂ ನಾಯಕ-ನಾಯಕಿಯರು

ಒಂದಾಗುತ್ತಾರೆ ಎಂಬ ಭರವಸೆಯಿಂದ

ಕಾದು ಕೊನೆಯವರೆಗೆ ಕೂತರು

ಜೀಯಾ ಮಾತ್ರ ಎದ್ದು ನಿಂತಳು

ವಿಳಾಸ  ಸ್ಥಾವರ ಹುಡುಕಾಟ ಜಂಗಮವೆನ್ನುವಂತೆ

‍ಲೇಖಕರು avadhi

19 September, 2019

1 Comment

  1. T S SHRAVANA KUMARI

    ಒಳ್ಳೆಯ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading