ಮುಖವೆಂಬ ರಂಗಭೂಮಿ…

ಉದಯಗಾಂವಕಾರ

ನಮ್ಮ ಮುಖವು ಅಭಿವ್ಯಕ್ತಿಯ ಸಾವಿರಾರು ಸಾಧ್ಯತೆಗಳಿಗೆ ರಂಗಭೂಮಿ. ವಿಕಾಸದ ಲಕ್ಷಾಂತರ ವರ್ಷಗಳ ಹಾದಿಯಲ್ಲಿ ಭಾವಾಭಿವ್ಯಕ್ತಿಯ ಸಂಕೇತಗಳನ್ನು ಉಂಟುಮಾಡುವ ನಮ್ಮ ಶರೀರಶಾಸ್ತ್ರ ಪರಿಪೂರ್ಣಗೊಳ್ಳುತ್ತಲೇ ಇದೆ. ನಮ್ಮ ಮುಖದ ಸ್ನಾಯುಗಳು ಮೆದುಳಿನ ಸಂದೇಶಗಳನ್ನು ಅರ್ಥೈಸಿಕೊಂಡು ಸಾಮರಸ್ಯದಲ್ಲಿ ಬಿಗಿಗೊಳ್ಳುತ್ತಾ, ಸಡಿಲುಗೊಳ್ಳುತ್ತಾ ನೂರಾರು ಭಾವಗಳನ್ನು ಪ್ರದರ್ಶಿಸುತ್ತವೆ. ನೂರಾರು ಪದಗಳಲ್ಲಿ ಹೇಳಬೇಕಾದದ್ದನ್ನು ದಾಟಿಸಲು ಒಂದು‌ ಮುಗುಳ್ನಗು ಸಾಕು.

ನಗುವನ್ನು ಸೃಷ್ಟಿಸಲು ಹತ್ತಾರು ಸ್ನಾಯುಗಳ ಶ್ರಮದ ಅಗತ್ಯವಿದೆ. ಫ್ರೊಂಟಾಲಿಸ್ ಸ್ನಾಯುವು ಹುಬ್ಬುಗಳನ್ನು ಎತ್ತರಿಸಿ, ಹಣೆಯ ಮಧ್ಯದಲ್ಲೊಂದು ಗೆರೆಯನ್ನು ಸೃಷ್ಟಿಸಿ ನಗುವಿಗೊಂದು ಪರಿಸರ ರೂಪಿಸುತ್ತದೆ. ಒರ್ಬಿಕುಲಾರಿಸ್ ಒಕುಲಿ ಎಂಬ ಸ್ನಾಯುವು ಕಣ್ಣನ್ನು ಕಿರಿದುಗೊಳಿಸುತ್ತದೆ. ಅದೇ ಕಾಲಕ್ಕೆ ಝೈಗೋಮೆಟಿಕ್ ಮೇಜರ್ ಸ್ನಾಯುವು ತುಟಿಯನ್ನು ಅದರ ಕೋನಗಳಲ್ಲಿ ಎಳೆದು ಹಿಗ್ಗಿಸಿದರೆ ಝೈಗೋಮೆಟಿಕ್ ಮೈನರ್ ಸ್ನಾಯುವು ಮೇಲ್ತುಟಿಯನ್ನು ಎತ್ತರಿಸಿ, ಕೆಳತುಟಿಯನ್ನು ತಗ್ಗಿಸಿ ನಗುವನ್ನು ಸಾಧ್ಯವಾಗಿಸುತ್ತದೆ. ಕೆಲವರಲ್ಲಂತೂ, ರಿಸೋರಿಯಸ್ ಸ್ನಾಯುಗಳ ಕಾರಣದಿಂದಾಗಿ ನಗುವಾಗ ಕೆನ್ನೆಯ ಮೇಲೊಂದು ಗುಳಿ ಬೀಳುತ್ತದೆ.

ಗೊಂಬೆಯಾಟದಲ್ಲಿ ಸೂತ್ರದಾರನ ಕೈಯಲ್ಲಿದ್ದ ಕೋಲಿನ ತುದಿಗಳಲ್ಲಿರುವ ದಾರಗಳು ವಿವಿಧ ದಿಕ್ಕಿನಲ್ಲಿ ಎಳೆದು ಗೊಂಬೆಯ ವಿವಿಧ ಭಂಗಿಗಳನ್ನು ಮೂಡಿಸುವಂತೆ ಅಥವಾ ನಾಟಕದ ಕೃತಿಕಾರರು, ನಿರ್ದೇಶಕರು, ನಟರು, ಹಿನ್ನೆಲೆ ಸಂಗೀತದ ಮೇಳ, ಬೆಳಕಿನ ವಿನ್ಯಾಸಕಾರರು, ಸಹಾಯಕರು ಮುಂತಾದವರೆಲ್ಲ ಸಾಮರಸ್ಯದಲ್ಲಿ ಕಾರ್ಯನಿರ್ವಹಿಸಿ ಚೆಂದದ ನಾಟಕವೊಂದನ್ನು ಕಟ್ಟುವಂತೆ ನಗುವೊಂದು ಅರಳುತ್ತದೆ.

ಇನ್ನೊಂದು ವಿಷಯ ಗೊತ್ತಾ?
ನಕ್ಕಾಗ ನೀವು ಚೆಂದ ಕಾಣ್ತೀರಿ!

ಎಲ್ಲರಿಗೂ ರಂಗಭೂಮಿ ದಿನಾಚರಣೆಯ ಶುಭಾಶಯಗಳು.

‍ಲೇಖಕರು Admin

March 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: