ರಾಘವೇಂದ್ರ ಭೀ ಎ ದ್ರಾಕ್ಷಿ
ಕಾಣದ ಬೆನ್ನಹಿಂದೆ
ಅಗಣಿತ ಮುಖವಾಡಗಳ ಕಂತೆಕಟ್ಟಿ
ಹೊರಟಿದ್ದೇವೆ ನಾವು
ನಶ್ವರ ಬದುಕಿನ ದುರಾಸೆಯಡಗೆ
ಕ್ಷಣಕೊಂದರಂತೆ
ದಿನಕೊಂದರಂತೆ
ಸಮಯಸಾಧಕರಂತೆ
ಸಂದರ್ಭಕ್ಕೆ ತಕ್ಕಂತೆ
ಒಂದೊಂದೆ ಬಾಣದಂತೆ ಬಿಡುತ್ತಾ
ಹೊರಟಿದ್ದೇವೆ ಕರಗದ ಮುಖವಾಡಗಳ ಹೊತ್ತು
ಕಳಕೊಂಡಿದ್ದೇವೆ ಮನುಷ್ಯತ್ವವ
ಹಿಡುಕೊಂಡಿದ್ದೇವೆ ಗಳಿಕೆಯ ಹುಚ್ಚುತನವ
ಕೊಲೆಸುಲಿಗ ಮಾಡುತ್ತಾ
ಮೋಸವಂಚನೆಗಯ್ಯುತ್ತಾ
ಸಾಗಿದ ಮುಖವಾಡದ ಜೀವನ ಕೊನೆಗಾಣಬೇಕಿದೆ

ಅವರಲ್ಲಿ ಅವರಂತೆ
ಇವರಲ್ಲಿ ಇವರಂತೆ
ಎಲ್ಲರಲ್ಲಿ ಎಲ್ಲರಂತೆ
ವರ್ಣಮಯ ಮುಖವಾಡಗಳ
ತೊಟ್ಟ್ಮೆರದ ಅಟ್ಟಹಾಸವ
ಕಿತ್ತೊಗೆಯಬೇಕಾಗಿದೆ ನಾವು
ಯಾರಿಗಾಗಿ ನಮ್ಮವರ ವೃದ್ಧಿಗಾಗಿ
ಸುಡಬೇಕಾಗಿದೆ ಮುಖವಾಡಗಳನ್ನ
ಸ್ವಾರ್ಥವ ತ್ಯೆಜಿಸಿ
ನಿಸ್ವಾರ್ಥವ ಸ್ವೀಕರಿಸಿ
ಮಾನವ ಭವಿಷ್ಯದ ಶ್ರೇಯಸ್ಸಿಗೆ
ಮನುಷ್ಯರಾಗಬೇಕಾಗಿದೆ
ನಾವು ಮುಖವಾಡಗಳ ಅಳಿಸಿ
ಮಾನವತೆಯ ಬೆಳಸಿ
ಮುಂದಿನ ಪಿಳಿಗೆಯ ಜ್ಞಾನದ ಬೆಳಕಿಗಾಗಿ






0 Comments