ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಕುಂದ ಬೃಂದಾ ಕವಿತೆ – ಉಫ್ !..

ಮುಕುಂದ ಬೃಂದಾ

ಬೇಡ ಎಂದು ಹೊರಡಲಾದೀತೆ 
ಇಲ್ಲ ಇದ್ದು ಜಯಿಸಬೇಕು ಅಲ್ಲ ದಾಟಬೇಕು 
ಇದು ಕಾಲ ಪರೀಕ್ಷೆ 
ಯುಗ ಯುಗದಲ್ಲೂ ನಡೆದು ಬಂದದ್ದೇ ಹೆಸರು ಬೇರೆ 
ಊರು ಬೇರೆ ಗಾತ್ರ ಬೇರೆ 
ಆದರೆ ಮೂಲ ಸತ್ವ ತತ್ವ ಅದೇ ಹೊಸತೇನಿಲ್ಲ 

ಹುಟ್ಟಿದವ ಸಾಯಲೇ ಬೇಕು ಯಾರೂ ಚಿರಂಜೀವಿಯಲ್ಲ 
ಅಂತಾ ಏನು ಬಿಟ್ಟಿದ್ದೇವೆ ಈಗ 
ದೇಶ ದೇಶಗಳ ಬಡದಾಟ ಸೀಮೆಗಳ ಪರದಾಟ 
ಮನೆ ಮನೆಯಲಿ ಜಗಳಾಟ ಗೀರು ಎಳೆವ ಹಟ 
ಮುಖವಾಡಗಳ ಧರಿಸಿ ನಡೆವರೇ ಎಲ್ಲ 
ಬಗ್ಗಿದವರ ಬಡಿವ ಜಗದಲಿ ಪ್ರಾಮಾಣಿಕತೆ ಸೋಗು 

ಉಫ್ ! ಹಳಸು ವಾಸನೆ ನಾರುತಿರೆ ಎಲ್ಲ 
ಮೂಗು ಮುಚ್ಚಿಕೊಂಡರೆ ಜೀವಕೆ ಅಪಾಯ 
ಹಾಗಾದರೆ ಏನಿದಕೆ ಉಪಾಯ ?
ಉರಿದು ಹೋಗುವ ಮೊದಲು ಕೈತೊಳೆದು ಶುಚಿಯಾಗುವ ಆಸೆ 
ಹ ಹ ಹ ಆಸೆ ದುಃಖಕ್ಕೆ ಕಾರಣ  
ಬಿಟ್ಟಿದ್ದಲ್ಲ ಗಬ್ಬು ಸಹಿಸಿ ಹೊಲಸ ನಡು ಪಾರುಮಾಡಬೇಕಿದೆ !!

‍ಲೇಖಕರು avadhi

3 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading