ಜಿ ಪಿ ಬಸವರಾಜು ಬರೆಯುತ್ತಾರೆ –

ಮುಂಗಾರು ಮುಖ ತೋರಿಸಿದೆ. ಗುಡುಗು, ಸಿಡಿಲು, ಮಿಂಚು, ಮೋಡಗಳ ಭರಾಟೆ, ಬಾನತುಂಬ ಆರ್ಭಟ, ಕಾತರಿಸಿದ ಭೂಮಿಗೆ ರಪ್ಪನೆ ಬಂದು ಅಪ್ಪಳಿಸುವ ನೀರ ಧಾರೆ. ಮಳೆಗಾಲದ ವೈಭವದ ನೂರು ಮುಖಗಳು ಗರಿಗೆದರಿ ನಿಲ್ಲುತ್ತವೆ.
ಮಳೆ ಮನುಷ್ಯನಲ್ಲಿ ಏಳಿಸುವ ಪುಳಕ ವಿಚಿತ್ರವಾದದ್ದು. ಹೊರಗಿನ ಮಳೆಗೆ ಒಳಜೀವ ತಂಪಾಗುತ್ತದೆ. ನೆನಪುಗಳು ಕೆದರುತ್ತವೆ. ಬಾಲ್ಯ-ಯೌವನ, ಭೂತ-ವರ್ತಮಾನ, ನೋವು-ಸಂತೋಷ ಒಂದರೊಳಗೊಂದು ಬೆಸೆದುಕೊಂಡು ಮೇಲೆಳುತ್ತವೆ. ತಮ್ಮೊಳಗಿನ “ಮಳೆಗಾಲ”ವನ್ನು ನಮ್ಮ ಮೂವರು ಲೇಖಕಿಯರು ಇಲ್ಲಿಚಿತ್ರಿಸಿದ್ದಾರೆ. “ತಿಂಗಳ”ನ್ನು ಕನ್ನಡಿಗರು ಬರಮಾಡಿಕೊಂಡಿರುವ ರೀತಿ ಅದ್ಭುತವಾದದ್ದು. ಈ ಪತ್ರಿಕೆ ತಮ್ಮ ಸಂವೇದನೆಯ ಒಂದು ಭಾಗ ಎಂದು ಓದುಗರು ಭಾವಿಸುವುದು ಆ ಪತ್ರಿಕೆಗೆ ಜೀವ ಚೈತನ್ಯವನ್ನು ಹೆಚ್ಚಿಸುತ್ತದೆ. ನಮಗೆ ತಿಳಿಯದ ರೀತಿಯಲ್ಲಿ ಅನೇಕ ಮಿತ್ರರು “ತಿಂಗಳು” ಬೆಳಕನ್ನು ಹಂಚಿದ್ದಾರೆ. ‘ತಿಂಗಳ ಕುಟುಂಬ’ವನ್ನು ವಿಸ್ತರಿಸಿದ್ದಾರೆ. ಎಲ್ಲರಿಗೆ ಕೃತಜ್ದತೆ ಹೇಳುವುದು ಕೃತಕವಾಗುತ್ತದೆ. ‘ತಿಂಗಳು’ ಸಂಚಿಕೆಯಿಂದ ಸಂಚಿಕೆಗೆ ಬದಲಾಗುತ್ತದೆ; ಬೆಳೆಯುತ್ತದೆ. ನೀವು ನಾವು ಎಲ್ಲರೂ ಜೊತೆ ಜೊತೆಯಾಗಿ ಹೆಜ್ಜೆ ಹಾಕೋಣ.
-ಸಂಪಾದಕ
ಮುಂಗಾರು ಮುಖ ತೋರಿಸಿದೆ
ನಿಮಗೆ ಇವೂ ಇಷ್ಟವಾಗಬಹುದು…





‘thingalu’ maasika-da chandaadaara-raguvudu hege?