ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀಸಲಾತಿ ಬೇಕೆ? ಪ್ಲೀಸ್ ತಗೊಳ್ಳಿ .

ಪ್ರಶಾಂತ್ ದಾನಪ್ಪ

ಕಂಬಾಲಹಳ್ಳಿ ಕೇರಿಯ ಥರ ತರ ದಿನಾಲೂ ನನ್ನ ಜನರ ಗುಡಿಸಲು, ದೇಹ ಸುಟ್ಟು ಕೊಲ್ಲುತ್ತಿರುವ ನಿಮ್ಮ ಊರಿನ ಜಾತಿಯಾಧಾರಿತ ಕೆಂಡದುಂಡೆಗಳನ್ನ ಮೀಸಲಾತಿ ಅಡಿ ಹಂಚಿಕೊಳ್ಳೋಣ, ಊರಿನವರೆ ನನ್ನ ಕೇರಿಗೆ ಬನ್ನಿ.! ನಾವೆಲ್ಲರೂ ಸಮ.!

ಈ ದೇಶದ ಕೇರಿಯಲ್ಲಿ ನನ್ನಕ್ಕ ತಂಗೀರ ಮೇಲೆ ಸಾವಿರಾರು ವರ್ಷದಿಂದ ನಿಮ್ಮೂರಿನ  ಜಾತ್ಯಾಧಾರಿತ ಅತ್ಯಾಚಾರಿಗಳು ಮೀಸಲಿಟ್ಟು ಎಸಗುವ ಅತ್ಯಾಚಾರಗಳು ಮೀಸಲಾತಿ ಅಡಿ ನಮ್ಮ ಹಾಗೆ ಹಂಚಿಕೆಯಾಗಬೇಕಲ್ಲವೇ? ಊರಿಂದ ಕೇರಿಗೆ ಬನ್ನಿ, ಹಂಚ್ಕೊಳ್ಳುವ,ನಾವೆಲ್ಲರೂ ಸಮ!

ಊರಿನವಳನ್ನ ಪ್ರೀತಿಸಿದನೆಂದು ಕೇರಿಯವನ ಕೊಚ್ಚಿದ ಮರ್ಯಾದೆ ಹತ್ಯೆಗಳೆಂಬ ‘ಜಾತ್ಯಾಧಾರಿತ ತುಕ್ಕಿನ ಮಚ್ಚಿನೇಟುಗಳನ್ನ’ ಮೀಸಲಾತಿ ಅಡಿ ಸಮನಾಗಿ ಹಂಚಿಕೊಳ್ಳೋಣ ಊರಿಂದ ಕೇರಿಗೆ ಬನ್ನಿ.
ನಾವೆಲ್ಲರೂ ಸಮ.!

ಲುಂಗಿ ಎತ್ತಿ ಕಟ್ಟಿದಕ್ಕೆ, ಮೀಸೆ ಬಿಟ್ಟಿದ್ದಕ್ಕೆ , ಅಂಬೇಡ್ಕರ್ ಹಾಡು ಹಾಕಿದ್ದಕ್ಕೆ, Rank ಬಂದಿದ್ದಕ್ಕೆ ಕೇರಿಯ ಹುಡುಗರಿಗೆ ನಿಮ್ಮ ಊರಿನ ಹುಡುಗ್ರು ಕೊಟ್ಟ ಜಾತ್ಯಾಧಾರಿತ ದೊಣ್ಣೆಗಳ ಏಟುಗಳನ್ನು ಮೀಸಲಾತಿ ಅಡಿ ಸಮನಾಗಿ ಹಂಚಿಕೊಳ್ಲೋಣ! ಊರಿಂದ ಕೇರಿಗೆ ಬನ್ನಿ.! ನಾವೆಲ್ಲರೂ ಸಮ.

ನೀರು ಕುಡಿಯಲೆಂದು, ಕೆರೆ, ನಲ್ಲಿ, ಬಾವಿ ಮುಟ್ಟಿದ ಕೇರಿಯವನನ್ನು ಬೆತ್ತಲಾಗಿಸಿ, ಮೆರವಣಿಗೆ ಮಾಡಿದ ನಿಮ್ಮೂರಿನ ಆ ಜಾತ್ಯಾಧಾರಿತ ಬೆತ್ತಲೆ ಮೆರವಣಿಗೆಯನ್ನ ಮೀಸಲಾತಿ ಕೋಟಾದಡಿ ಹಂಚಿಕೊಳ್ಳೋಣ, ಬಟ್ಟೆ ಬಿಚ್ಚಿ ಊರಿಂದ ಕೇರಿಗೆ ಬನ್ನಿ ಮೆರವಣಿಗೆ ಹೋಗೋಣ ಬೆತ್ತಲಾಗಿ, ನಾವೆಲ್ಲರೂಸಮ.!

‍ಲೇಖಕರು avadhi

29 May, 2018

2 Comments

  1. Vijendra

    Very good one

  2. Kiran

    ಜಾತಿ ಆಧಾರಿತ ಶೋಷಣೆ ಅಕ್ಷಮ್ಯ, ಕೆಲವು ಉತ್ತಮ ಜಾತಿಯವರು ಎಂದು ಅಂದುಕೊಂಡ ಅಧಮರು ಎಸಗುವ ಅತ್ಯಾಚಾರಗಳು ಮತ್ತು ಕ್ರೌರ್ಯ ಕೂಡ ಅಕ್ಷಮ್ಯ ಮತ್ತು ಎಲ್ಲ ರೀತಿಯಲ್ಲೂ ಶಿಕ್ಷಾರ್ಹ ಅಪರಾಧ, ಅಂಥಾ ಅಪರಾಧಗಳು ಸಂಪೂರ್ಣ ಅರಿವಿದ್ದೇ ಮಾಡುವುದರಿಂದ ಅವರನ್ನು ಅತ್ಯಂತ ಕಠಿಣವಾಗಿ ಶಿಕ್ಷಿಸಬೇಕು, ಅದರಲ್ಲಿ ಎರಡು ಮಾತಿರಬಾರದು..
    ಅದೇ ರೀತಿಯಲ್ಲಿ ಜಾತಿ ಆಧಾರಿತ ಜಾತ್ಯತೀತ ಲೇಬಲಿನ ಡೋ೦ಗಿ ರಾಜಕಾರಣ, ಜಾತಿ ಆಧಾರಿತ ಸರಕಾರಿ ಯೋಜನೆಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ
    ಜಾತಿ ಆಧಾರಿತ ಮೀಸಲಾತಿ ಕೂಡ ಅಷ್ಟೇ ಕ್ರೂಡ್ ಮತ್ತು ಅವೈಜ್ಞಾನಿಕ ಪದ್ಧತಿ..ಅದರಲ್ಲೂ IAS ಆಫೀಸರ್ಗಳ ಮಕ್ಕಳು ಮತ್ತು ಶ್ರೀಮಂತರ ಮಕ್ಕಳು ಮೀಸಲಾತಿ ಅಡಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು!!
    ಅಸಮಾನತೆ ಹೋಗಲಾಡಿಸಲು ನಮಗೆ ಬೇರೊಂದು ವಿಧಾನ ಬೇಕಾಗಿದೆ, ಅತ್ಯಂತ ಮೂಲಭೂತವಾಗಿ ಜಾತಿ ಅನ್ನೋದೇ ಹೋಗಬೇಕು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading