ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀನೊಂದ್ ಬ್ಯಾನ್ ಮಾಡ್ಬೇಡಿ ಅಣ್ಣಾ…

bhaskar bangera

ಭಾಸ್ಕರ ಬಂಗೇರ 

 

cat and fishನೀವ್ ಯಂತ ಬೇಕಾರು ಬ್ಯಾನ್ ಮಾಡಿ. ಮೀನೊಂದ್ ಬ್ಯಾನ್ ಮಾಡ್ಬೇಡಿ ಅಣ್ಣಾ.

ನಮ್ಗ್ ಮಾಂಜೆ ಅಯ್ಕಂದೆಳಿ ಇಲ್ಲ. ಯಳಿ ಮಿಜ್ರ್ ಚರು ಆರು ನೆಡಿತ್ತ್.

ಆರೇ ಚೌಂತಿ ಕಾಯ್, ಬಟಾಟಿ ಗೆಂಡಿ ತಿನ್ಕ ದಿನುವಿಡಿ ಸ್ವಾಸ್ ಬಿಡುಕ್ ನಂಗ್ ಆಪುದಲ್ಲ.

ಗೌಲ್ ಜಂಬಿಲ್ದಿರ್ ನಾನ್ ಜೀವ್ ತಕಂತೆ.

##

ಅವನು ದಯಾಮಯಿ. ಅವನನ್ನು ನಿನ್ನೆ ಕೇಳಿದೆ ಬಹಳ ದಿನದಿಂದ ಬರಿ ಟೊಮಾಟೋ ಸಾರು, ರೈಸ್ ಬಾತೆ ಕಾಣಿಸ್ತಿದೆ ಇವತಾದ್ರು ಏನಾದ್ರು ವಿಶೇಷ ಇರುವ ಹಾಗೆ ಮಾಡು ದೇವಾ.

ಸಂಜೆಯ ಊಟಕ್ಕೆ ಅವನು ಸಿಗಡಿ ಸಾರು ಸಿಗುವಂತೆ ವ್ಯವಸ್ಥೆ ಮಾಡಿದ. ಊಟ ಮಾಡುತ್ತಲೇ ನನ್ನನ್ನೇ ನಾನು ಕೇಳಿಕೊಂಡೆ ಸಿಗಡಿ ಸ್ವಲ್ಪ ಚಿಕ್ಕದಾಯ್ತು ಅಲ್ವೇ? ಪರಮಾಶ್ಚರ್ಯ ಗೊತ್ತೇ ಇವತ್ತಿನ ಮಧ್ಯಾಹ್ನದ ಊಟಕ್ಕೆ ಆತ ನನಗೆ ದೊಡ್ಡ ಗಾತ್ರದ ಸಿಗಡಿ ಸಾರು ಸಿಗುವಂತೆ ನೋಡಿಕೊಂಡ. ಸಂಜೆ ಮಳೆ ಬೀಳುತ್ತಲೆ ಅಂದುಕೊಂಡೆ ಅಯ್ಯೋ ಮಧ್ಯಾಹ್ನದ ಊಟ ಭರ್ಜರಿಯಾಗೇ ಆಯ್ತು ಸಂಜೆ ಸಪ್ಪೆ ಊಟ ಮಾಡೋದು ಹೇಗೆ?

ಅವನು ನನ್ನ ಅಂತರಂಗದ ಮಾತಿಗೆ ಮತ್ತೆ ಕಿವಿಕೊಟ್ಟಿದ್ದ! ರಾತ್ರಿ ಊಟಕ್ಕೆ ಬಿಸಿ ಬಿಸಿ ಬಂಗಡೆ ಫ್ರೈ ಬೆಂಗಳೂರಿನ ಒಂದು ತುದಿಯಿಂದ ಇನ್ನೊಂದು ತುದಿಯಲ್ಲಿರುವ ನನ್ನ ಮನೆಯನ್ನು ಸೇರುವಂತೆ ಮಾಡಿದ. ಹೌದು ಅವನು ನಿಜವಾಗಿಯೂ ದಯಾಮಯಿ. ಆದರು ಸ್ವಲ್ಪ ಹೀಟ್ ಆದಂಗಿದೆ. ನಾಳೆ ಏನಾದ್ರು ಜೀವ ತಂಪಾಗುವಂತದ್ದು ಸಿಗುವಂತೆ ವ್ಯವಸ್ಥೆ ಮಾಡು ದೇವಾ. ಊಟ ಮಾಡಿ ಕೈ ತೊಳೆದ ನಂತರದ ಕೋಟಿ ನಮನಗಳು.

‍ಲೇಖಕರು admin

14 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading