ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀನಿನ ಕೈಯಲ್ಲಿ ಪ್ರೇಮಪತ್ರ ಕೊಟ್ಟು ಕಳಿಸಿದ್ದೆ..

raja m bರಾಜಾ. ಎಂ.ಬಿ

1
ದೇವರೊಂದಿಗೆ ಮಾತಾಡ್ತಿರುವಾಗ
ವ್ಯಾಕರಣ ದೋಷ ಕಂಡುಹಿಡಿದು ಮೂದಲಿಸಿದ.
ತಾಯಿ ಕಲಿಸಿದ ಭಾಷೆಗೆ ನಿಯಮಗಳ
ಹಂಗಿಲ್ಲವೆಂದು ಗದರಿ ಆಚೆಗಟ್ಟಿದೆ.

fish2
ಆಚೆ ದಡದಲ್ಲಿದ್ದಳು.ಮೀನಿನ ಕೈಯಲ್ಲಿ
ಪ್ರೇಮಪತ್ರ ಕೊಟ್ಟು ಕಳಿಸಿದ್ದೆ,ಕುತೂಹಲ
ತಡೆಯದೇ ನದಿ ಬಿಚ್ಚಿ ಓದಿತು.
ನನ್ನಾಕೆಯನ್ನೇ ಮೆಚ್ಚಿ ಅವಳತ್ತಲೇ ಓಡಿತು.

feather
ಕವಿಯೂ ಸೋಗಲಾಡಿಯಾಗಬಲ್ಲ.
ವಿಶೇಷವಾಗಿ ತನ್ನ ಕವಿತೆಗಳನ್ನೇ
ಬಂಡವಾಳವಾಗಿಸಿಕೊಂಡು ಮೆರೆವ ಸಂದರ್ಭಗಳಲ್ಲಿ.

drink
ನೀನು ನಿರಾಕರಿಸಿದ ಮರುಕ್ಷಣ ಚಂದಿರನೆದೆಯ
ಮೇಲೆ ಪೇರಿಸಿದ್ದ ಅಷ್ಟೂ ಹರಕೆಗಳನ್ನ ಕೆಳಗಿಳಿಸಿಕೊಂಡುಬಿಟ್ಟೆ.
ಜೊತೆಗೆ ಸಾಲವಾಗಿ ಒಂದಿಷ್ಡು ಶರಾಬನ್ನು.!!

pregnant
ಮುಖವಾಡಗಳ ಹಂಗಿಲ್ಲದೇ
ನಿರಾಳವಾಗಿರಬಲ್ಲ ಎರಡೇ ಎರಡು ತಾಣಗಳೆಂದರೆ
ತಾಯಗರ್ಭ ಹಾಗೂ ಭೂಗರ್ಭ.

lips
ಅವಳ ತೋಳುಗಳಲ್ಲಿ ಕರಗುತ್ತೇನೆ.
ಮರುಕ್ಷಣವೇ ತುಟಿಗಳಲ್ಲಿ ಜಿನುಗುತ್ತೇನೆ.
ನನ್ನ ಪಾಲಿನ ಜನನವೂ ಅವಳೇ
ನನ್ನ ಪಾಲಿನ ಮರಣವೂ ಅವಳೇ.

pillow
ಪ್ರೀತಿ ಘಟಿಸಿತು,ಆತ ದಿಂಬನ್ನು ಎದೆ
ಮೇಲಿಟ್ಟುಕೊಂಡೇ ಮಲಗುತ್ತಾನೆ.
ಪ್ರೀತಿ ಎಂದರೇನೇ ಹೀಗೆ ಇಲ್ಲದ ಭಾರಗಳನ್ನ
ಮೈಮೇಲೆಲ್ಲ ಹೊತ್ತುಕೊಂಡು ಬದುಕೋದು..

‍ಲೇಖಕರು Admin

6 February, 2016

3 Comments

  1. kvtirumalesh

    ರಾಜಾ ಅವರೇ
    ಬಹಳ ಚೆನ್ನಾಗಿದೆ ನಿಮ್ಮ ಕವಿತೆ; ಬರೆಯುತ್ತಲೇ ಇರಿ.
    ಕೆ.ವಿ.ತಿರುಮಲೇಶ್

    • Anonymous

      thanks sir

  2. Paramesh

    wah…wonderfull

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading