ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀನಿಗೆ ಗುರಿಯಿಟ್ಟಿದೆ ಮಿಂಚುಳ್ಳಿ..

ಧ್ಯಾನ

ಹರೀಶ್ ಕಟ್ಪಾಡಿ

 
ಒಂಟಿಕಾಲಿನ ಮೇಲೆ
ಕಠಿಣ ತಪಸ್ವಿ ಸಾಧು
ಭೇಟೆಗೆ ಹೊಂಚುತ್ತಿದೆ ಕೊಕ್ಕರೆ.

ಕವಿತೆಯ ಧ್ಯಾನದಲ್ಲಿ
ಕಳೆದುಹೋದ ಕವಿ
ಮೀನಿಗೆ ಗುರಿಯಿಟ್ಟಿದೆ ಮಿಂಚುಳ್ಳಿ.
 
ಆಗಸದಂಚಿಗೆ ಹಾರಿ
ಮರೆಯಾಯಿತು ಬೆಳ್ಳಕ್ಕಿ ಮಂದೆ
ಮಿಂಚಿ ಮರೆಯಾದ ಕವಿತೆಯ ಸಾಲು.
 
ಸಿಕ್ಕರೆ
ಕವಿಗೆ ಕವಿತೆ
ಮಿಂಚುಳ್ಳಿಗೆ ಮೀನು
 
ನಿನಗೆ ನೀನು
ನನಗೆ ನಾನು
 
 

‍ಲೇಖಕರು G

2 May, 2015

3 Comments

  1. Rohini Satya

    Maarmikavaagide! Chennaagide.

  2. mmshaik

    very..very nice.sir

    • Anonymous

      thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading