ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀಡಿಯಾ ಮೈಂಡ್ ನಲ್ಲಿ ಮೀಡಿಯಾ ಮಿರ್ಚಿ

gn sept 1 (1)

‘ಇಲ್ಲ ಆ ನ್ಯೂಸ್ ಬ್ರೆಕ್ ಮಾಡ್ಬಾರ್ದಿತ್ತು’ ಅಂತ ಗೆಳೆಯರೊಬ್ಬರು ಫೋನ್ ಮಾಡಿದಾಗ ರಾತ್ರಿ 8 ಗಂಟೆ ಕಳೆದು ಹೋಗಿತ್ತು. ದಟ್ಟ ನಕ್ಸಲೈಟ್ ಕೇಂದ್ರ ಎನಿಸಿಕೊಂಡಿದ್ದ ನಲ್ಲಮಲ್ಲ ಕಾಡಿನಲ್ಲಿ ಏನಾಗಿದೆ ಅನ್ನೋದೇ ಯಾರ ಊಹೆಗೂ ನಿಲುಕದಂತಾಗಿ ಹೋಗಿತ್ತು. ಫೋನ್ ಮಾಡಿದ್ದ ಗಳೆಯರಿಗಿದ್ದ ಆತಂಕ ನಕ್ಸಲೈಟುಗಳು ಹೆಲಿಕಾಪ್ಟರ್ ಹೊಡೆದುರುಳಿಸದೇ ಇದ್ರೂ ದಿಕ್ಕು ತಪ್ಪಿರುವ ‘ಬ್ರೆಕಿಂಗ್’ ಸುದ್ದಿ ಅವರನ್ನು ಅಲರ್ಟ್ ಮಾಡುತ್ತೆ. ‘ಸುಮ್ನೆ ಹಗ್ಗ ಕೊಟ್ಟು ಕೈಕಟ್ಟಿಸಿಕೊಳ್ಳೋ ಸಮಾಚಾರ ಇದು. ಈ ಬ್ರೆಕಿಂಗ್ ನ್ಯೂಸ್ ಗಳು ಇಲ್ಲದೇ ಇರೋ ಪ್ರಾಬ್ಲಂನ ಸೃಷ್ಟಿ ಮಾಡುತ್ತೆ’ ಅಂತ ಕಿಡಿ ಕಾರಿದ್ರು.

ತಕ್ಷಣ ನನಗೆ ನೆನಪಾಗಿದ್ದು ಮುಂಬೈನಲ್ಲಿ ನಡೆದ ಟೆರರಿಸ್ಟ್ ಅಟ್ಯಾಕ್ . ಬಹುಷಃ ಮಾಧ್ಯಮದ ರೋಲ್ ಇಂತ ಸಂದರ್ಭದಲ್ಲಿ ಹೇಗಿರ್ಬೇಕು ಅಂತ ದೊಡ್ಡ ಚರ್ಚೆ ಆಗಿದ್ದು ಆಗ್ಲೇ. ‘ಕ್ಯಾಮರಾ ಆ ಕಡೆ ಪ್ಯಾನ್ ಮಾಡಿ, ಈ ಕಡೆ ತೋರಿಸಿ’ ಅಂತ ಹೇಳ್ತಾ ವರದಿಗಾರರು ಪಟ ಪಟ ವಿವರ ಕೊಡ್ತಾ ಇದ್ರೆ ಇತ್ತ ಟಿವಿ ಮಂದೆ ಕೂತಿರೋರಿಗೆ ಅಯ್ಯೋ ಟೆರರಿಸ್ಟಿಗೆ ಬೇಕಾದ ಮಾಹಿತಿ ಎಲ್ಲಾ ಟೀವೀನೋರೆ ಕೊಟ್ಬಿಡ್ತಾರಲ್ಲಪ್ಪ ಅಂತ ಅವಡುಗಚ್ಚಿಕೊಳ್ತಾ ಇದ್ರು. ಒಬೆರಾಯ್ ಟ್ರಿಡೆಂಟ್ ಹೋಟೆಲ್ ನಲ್ಲಿ ಯಾರೂ ಸಿಕ್ಕಿಹಾಕಿಕೊಂಡಿಲ್ಲ ಅಂತ ಆರ್ಮಿ ಹೇಳಿಕೆ ಕೊಟ್ಟ ಮೇಲೂ ಟಿ ವಿ ಯವರು ಹೋಟಲ್ ನ ರಿಸಪ್ಷನ್ನಿಗೇ ಫೋನ್ ಮಾಡಿ ಅಲ್ಲಿ ಇಂತಿಷ್ಟು ಜನ ಇದ್ದಾರೆ ಅನ್ನೋ ವಿವರ ಕೊಟ್ರು. ಅಲ್ಲಾ ಇದೆಲ್ಲಾ ಟೆರರಿಸ್ಟ್ ಗಳಿಗೆ ಮಾಡೋ ಹೆಲ್ಪ್ ಅಲ್ಲವಾ ಅಂತ ನೂರೆಂಟು ಚರ್ಚೆ ಎದ್ದೇಳ್ತು. ಟಿ ವಿ ಕ್ಯಾಮರಾ ಆಚೀಚೆ ತಿರುಗಿದಾಗ ಒಂದು ಕ್ಷಣ ಬೆರಗಾಗಿಬಿಡೋ ಅಷ್ಟು ವರದಿಗಾರರು, ಕ್ಯಾಮರಾಮನ್ ಗಳು ಸುದ್ದಿ ತಯಾರಿಸುವುದರಲ್ಲಿ ಬ್ಯುಸಿಯಾಗಿದ್ರು. ಒಂದು ಕಡೆ ಬರ್ಖಾ ದತ್ ಇನ್ನೊಂದ್ಕಡೆ ನೂರಾರು ‘ಬರ್ಖಾದತ್ಸ್ ಇನ್ ಮೇಕಿಂಗ್’

ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

7 September, 2009

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

3 Comments

  1. ಶಾರದಾ ನಾಯ್ಕ

    ನ್ಯೂಸ್ ಛಾನೆಲ್ ಗಳು ಮಾಡುವ ಅದ್ವಾನ ಒಂದಲ್ಲ..ದೊಡ್ಡ ಪಟ್ಟಿಯಾದೀತು.ಮೊನ್ನೆ ರೆಡ್ಡಿ ತೀರಿ ಹೋದ ದಿನ ಎನ್ ಡಿಟಿವಿಯಲ್ಲಿ ಈ ರೀತಿ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.ವೈಎಸ್ಆರ್ ಕಿಲ್ಡ್-ಎಲ್ಇಟಿ ಕಮಾಂಡರ್ ಅರೆಸ್ಟೆಡ್…ಎರಡು ಒಂದೇ ಫಾಂಟ್ ನಲ್ಲಿದ್ದರಿಂದ ರೆಡ್ಡಿ ಸಾವಿಗೀಡಾಗಲು ನಾನು ಲಷ್ಕರ್ ಎ ತಯ್ಯಬಾ ಕಾರಣ ಎಂದ್ಕೊಂಡೆ.

  2. cautiousmind

    ಒಂದು ಕಡೆ ಬರ್ಖಾ ದತ್ ಇನ್ನೊಂದ್ಕಡೆ ನೂರಾರು ‘ಬರ್ಖಾದತ್ಸ್ ಇನ್ ಮೇಕಿಂಗ್’…..ಸೂಪರ್ ಸೆಂಟೆನ್ಸ್….

  3. Kalpana

    Sharadha you are watching NDTV these days..
    watch ETV. no confusion. no TRP

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading