ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀಡಿಯಾ ಮಿರ್ಚಿ: ಮಾಧ್ಯಮದಲ್ಲಿ ಜ್ಯೋತಿಷ್ಯ

GN (1)‘ಮೋಹನ್, ಇದನ್ನು ಸ್ವಲ್ಪ ಬರೆದುಕೊಟ್ಬಿಡಿ’ ಅಂತ ‘ಇಂದಿರಾತನಯ’ ಎಂದೇ ಹೆಸರಾಗಿದ್ದ ಶ್ಯಾಮ್ ಅವರು ನನ್ನ ಕೈಗೆ ಒಂದು ಕಾಪಿ ಕೊಟ್ಟರು. ಪ್ರಜಾವಾಣಿ ಕಛೇರಿಯ ಮಧ್ಯಾಹ್ನದ ಶಿಫ್ಟ್ ನಲ್ಲಿ ಶಸ್ತ್ರ ಸನ್ನದ್ಧನಾಗಿ ಕುಳಿತಿದ್ದೆ. ಟೆಲಿಪ್ರಿಂಟರ್ ನಲ್ಲಿ ಟಪ ಟಪ ಅನ್ನೋ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮಧ್ಯೆ ಹೊರಬೀಳುತ್ತಿದ್ದ ನ್ಯೂಸ್ ರಾಶಿಯನ್ನು ಪರ್ರನೇ ಬರೆಯಲು ಕೈಗಿಡುತ್ತಿದ್ದರು. ಈ ಮಧ್ಯ ಟೆಲಿಪ್ರಿಂಟರ್ ಅಲ್ಲದ ಏನಾದರೂ ಬಂದರೆ ಅದು ‘ಸ್ಪೆಷಲ್ ಸರ್ವೀಸ್’. ಇಂದಿರಾತನಯ ತಂತ್ರ ಕಾದಂಬರಿಗಳಿಗೆ ಎತ್ತಿದ ಕೈ. ನಾನು ಆಗೀಗ ಒಂದಿಷ್ಟು ಗೀಚುವುದು ನೋಡಿಯೋ ಏನೋ ಈ ಸ್ಪೆಷಲ್ ಸರ್ವೀಸ್ ಗೆ ಬಳಸಿಕೊಳ್ಳುತ್ತಿದ್ದರು. ‘ಮೊದ್ದುಮಣಿ’ಗೆ ಒಂದು ಪಂಚಿಂಗ್ ಲೈನ್ ಬೇಕಾದರೆ, ಕ್ಯಾಮರಾಮನ್ ಗಳು ಆಗೀಗ ತರುತ್ತಿದ್ದ ಆಫ್ ಬೀಟ್ ಫೋಟೋಗಳಿಗೆ ಕ್ಯಾಪ್ಷನ್ ಬೇಕಾದರೆ, ಸಡನ್ನಾಗಿ ಖಾಲಿ ಬೀಳುತ್ತಿದ್ದ ನಾಡು-ನಾಡಿಗೆ ಕೊನೆಯ ನಿಮಿಷದಲ್ಲಿ ಏನಾದರೂ ಹೊಸೆಯಬೇಕಾದರೆ , ಹಿಂದಿಯಲ್ಲಿ ಬಂದು ಬೀಳುತ್ತಿದ್ದ ಟಿವಿ ಸೀರಿಯಲ್ ಕಥೆಗಳನ್ನು ಕನ್ನಡಕ್ಕಿಳಿಸಬೇಕಾದರೆ ಶ್ಯಾಮ್ ಆಗೀಗ ನನ್ನ ಕಡೆ ನೋಡುತ್ತಿದ್ದರು.
‘ಇದನ್ನು ಸ್ವಲ್ಪ ಬರೆದುಕೊಟ್ಬಿಡಿ’ ಅಂತ ಅವರು ನನ್ನೆದುರು ನಿಂತಾಗ ‘ಓಕೆ, ರೆಡಿ’ ಎನ್ನುವಂತೆ ಬರೆಯಲು ನ್ಯೂಸ್ ಪ್ರಿಂಟ್ ಹಾಳೆ ಎಳೆದುಕೊಂಡೆ. ಒಂದು ಕ್ಷಣ ತಲೆ ಬುಡ ಅರ್ಥ ಆಗಲಿಲ್ಲ. ಅವರ ಮುಖ ನೋಡಿದೆ. ಮಿನಿ ಸ್ಮೈಲ್ ನನ್ನೆಡೆಗೆ ಎಸೆದು ಬರೆದು ಬಿಡಪ್ಪಾ ಅಂದ್ರು. ನನ್ನ ಕೈಯಲ್ಲಿದ್ದದ್ದು ದಿನಭವಿಷ್ಯ. ಅಮೇರಿಕಾದ ಪಾಲಿಟಿಕ್ಸ್ , ಗೋರ್ಬಚೇವ್ ಫೇಲ್ಯೂರ್, ಡಯಾನ ಹಾಟ್ ನ್ಯೂಸ್, ವಾಚಕರವಾಣಿ ಪತ್ರ , ಜಿಲ್ಲಾ ಸುದ್ದಿ ಸೊಗಡು ಎಲ್ಲಾ ಬರೆದು ಗೊತ್ತಿದ್ದ ನಾನು ಕಕ್ಕಾಬಿಕ್ಕಿಯಾಗಿದ್ದೆ. ‘ಪ್ರತೀ ದಿನ ಕರೆಕ್ಟ್ ಟೈಮಿಗೆ ಬರುತ್ತಿತ್ತು. ಇವತ್ತು ಕೈ ಕೊಟ್ಟು ಬಿಟ್ಟಿದ್ದಾರೆ. ದಿನ ಭವಿಷ್ಯ ಇಲ್ಲದೇ ಪತ್ರಿಕೆ ತರೋದಿಕ್ಕೆ ಆಗುತ್ತಾ.. ಸ್ವಲ್ಪ ನೀವೇ ಬರೆದುಬಿಡಿ’ ಅಂದ್ರು. ಅವರು ನನ್ನ ಕೈಗೆ ಕೊಟ್ಟಿದ್ದದ್ದು ಹಿಂದಿನ ದಿನದ ಭವಿಷ್ಯ. ಅದನ್ನೇ ಸ್ವಲ್ಪ ಆಕಡೆ ಈಕಡೆ ಹೊರಳಿಸಿದರೆ ಇವತ್ತಿನ ಭವಿಷ್ಯ ಆಗುತ್ತಿತ್ತು. ಪತ್ರಿಕೋದ್ಯಮಕ್ಕೆ ಎಂಟ್ರಿ ಕೊಡುವಾಗ ಹಿರಿಯರೊಬ್ಬರು ಹೇಳಿದ್ದು ಜ್ಞಾಪಕಕ್ಕೆ ಬಂತು. ಜರ್ನಲಿಸಂ ಅಂದ್ರೆ ‘ಜಾಕ್ ಆಫ್ ಆಲ್’ ಆಗಿರಬೇಕು., ಸೈನ್ಸ್ ಟು ಸೆಕ್ಸ್ ಏನ್ಬೇಕಾದ್ರೂ ಬರೀಬೇಕಾಗಿ ಬರುತ್ತೆ ಅಂತ. ಈಗ ಬರೀಬೇಕಾಗಿ ಬಂದದ್ದು ಸೈನ್ಸೂ ಅಲ್ಲ ಇತ್ಲಾಗೆ ಸೆಕ್ಸೂ ಅಲ್ಲ, ಹೋಗ್ಲಿ ಅಂದ್ರೆ ಸೆನ್ಸೆಕ್ಸೂ ಅಲ್ಲ. ನಾಳೆ ಪತ್ರಿಕೆ ಓದುವ ಮುಕ್ಕೋಟಿ ಕನ್ನಡಿಗರ ಹಣೆಬರಹ. ಶ್ಯಾಮ್ ಆಗ ಒಂದು ಟ್ರೇಡ್ ಸೀಕ್ರೆಟ್ ಹೇಳಿಕೊಟ್ಟರು. ಬರೆಯುವಾಗ ಎಲ್ಲರಿಗೂ ಒಳ್ಳೇದೇ ಬರೆದು ಬಿಡು ಅಂತ.
ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್

‍ಲೇಖಕರು avadhi

12 October, 2009

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading