‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಬಿಸಿ ಗೊತ್ತಾಗತ್ತೆ ಆಲ್ವಾ?’ ಅಂತ ಕವಿ ಸು ರಂ ಎಕ್ಕುಂಡಿ ನನ್ನತ್ತ ನೋಡಿದ್ರು. ಅವರ ಮಾತಿನಲ್ಲಿ ಸುಳಿದು ಹೋಗ್ತಾ ಇದ್ದದ್ದು ಬಂಕಿಕೊಂಡ್ಲದ ಬಡತನದಲ್ಲ್ಲೇ ಬದುಕು ದೂಡುತ್ತಿದ್ದ ಹಾಲಕ್ಕಿ ಒಕ್ಕಲಿಗರು. ಅಲ್ಲಿನ ಶಾಲೆಯ ಮುಖ್ಯೋಪಾದ್ಯಾಯರಾಗಿದ್ದ ಎಕ್ಕುಂಡಿ ದಿನ ನಿತ್ಯ ಹಾಲಕ್ಕಿ ಒಕ್ಕಲಿಗರ ನೋವನ್ನು ಕಂಡಿದ್ದರು. ಆ ನೋವಿಗೆ ನಾನೆಷ್ಟು ದನಿ ನೀಡಿದರೂ ಅವರ ಎಲ್ಲಾ ಯಾತನೆಯನ್ನು ಬಣ್ಣಿಸಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಅವರು ಹಾಗಂದಾಗ ಮರಾಠಿಯಲ್ಲಿ ಸಡನ್ನಾಗಿ ಎದ್ದು ಬಂದ ಲಕ್ಷ್ಮಣ್ ಗಾಯಕ್ವಾಡ್, ದಯಾ ಪವಾರ್, ವಸಂತ್ ಮೂನ್ ಆತ್ಮ ಕಥೆಗಳು ನೆನಪಿಗೆ ಬಂತು. ಹಸು ಹಾಕಿದ ಸಗಣಿಯಲ್ಲಿ ಜೀರ್ಣವಾಗದೆ ಉಳಿದು ಹೋಗಿದ್ದ ಕಾಳುಗಳನ್ನು ಹೆಕ್ಕಿ ರೊಟ್ಟಿ ಮಾಡಲು ಸಿದ್ಧವಾಗುತ್ತಿದ್ದವರ ಚಿತ್ರ ಕಣ್ಣ ಮುಂದೆ ಬಂತು. ಫ್ಲೇವಿಯಾ ಆಗ್ನೆಸ್ ಹಿಂಸೆ ಹೊಡೆತಕ್ಕೆ ತುತ್ತಾಗಿ ಮನೆ ಬಿಟ್ಟು ಹೊರಟದ್ದು ಆಕೆಯೇ ಬರೆಯಲು ಸಾಧ್ಯ. ಅರವಿಂದ ಮಾಲಗತ್ತಿ ’ಗೌರ್ಮೆಂಟ್ ಬ್ರಾಹ್ಮಣ’ದಲ್ಲಿ ಬಿಚ್ಚಿಟ್ಟ ವಿವರಗಳು ಒಂದು ಕ್ಷಣ ಕರುಳನ್ನೇ ಕೊರೆದು ಹಾಕಿತ್ತು. ’ಹಸಿವಿನಿಂದ ಸತ್ತೋರು, ಸೈಜುಕಲ್ಲು ಹೊತ್ತೋರು, ವದೆಸಿಕೊಂಡು ವರಗೀದೊರು ನನ್ನ ಜನಗಳು… ಅಂತ ಸಿದ್ಧಲಿಂಗಯ್ಯ ಬರೆದಾಗ ಅವರ ಒಡಲಾಳದಲ್ಲಿ ಎಷ್ಟು ನೋವಿತ್ತೋ…
ಸಂಪೂರ್ಣ ಓದಿಗೆ: ಮೀಡಿಯಾ ಮೈಂಡ್






0 Comments