ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಿಸ್ ಮಾಡದೇ ನೋಡಿ ‘Cinema bandi’

ಶಿವು ಕೆ

ನಮ್ಮ ‘ತಿಥಿ’ ಸಿನಿಮಾ ಬಂದ ಮೇಲೆ ಅದೇ ರೀತಿಯ ಅನೇಕ ಸಿನಿಮಾಗಳು ಬರುತ್ತಿವೆ ಅದರ ದಾಟಿಯಲ್ಲಿಯೇ ಬಂದ ಈ ಸಿನಿಮಾ ಹೆಸರು ತೆಲುಗು ಭಾಷೆಯ ‘Cinema bandi’ Netflix ನಲ್ಲಿ ಬಂದಿದೆ.

ಈ ಪೂರ್ತಿ ಚಿತ್ರದ ತಿರುಳು ಮುಗ್ಧತೆ. ಈ ರೀತಿಯ ಮುಗ್ಧತೆಯಲ್ಲಿ ನಾವು ಬದುಕಿದರೆ ಎಷ್ಟು ಚೆನ್ನ ಅಂತ ಈ ಸಿನಿಮಾ ನೋಡಿದ ಮೇಲೆ ಅನ್ನಿಸುತ್ತದೆ. ಪೂರ್ತಿ ಚಿತ್ರ ನಕ್ಕು ನಲಿಸುತ್ತದೆ. ಹಳ್ಳಿಯ ಆಟೋ ಚಾಲಕನಿಗೊಬ್ಬನಿಗೆ ದುಬಾರಿ DSLR ಕ್ಯಾಮೆರ ಸಿಕ್ಕುತ್ತದೆ. ಅಲ್ಲಿಂದ ಮುಂದೇನಾಗುತ್ತದೆಯೆನ್ನುವುದು ಪೂರ್ತಿ ಸಿನಿಮಾ

ಈ ಚಿತ್ರದಲ್ಲೂ ಗಡ್ಡಪ್ಪನಂತ ಒಂದು ಪಾತ್ರವಿದೆ. ಇಡೀ ಚಿತ್ರದಲ್ಲಿ ಆತ ಒಂದು ಮಾತು ಆಡುವುದಿಲ್ಲ. ‘ತಾತ ಈ ಕಥೆಯನ್ನು ಬರೆದಿದ್ದು ನೀನೇನಾ? ನನಗೆ ಓದೋಕೆ ಬರೊಲ್ಲಮ್ಮ’ ಅಂತ್ಯದಲ್ಲಿ ಬರುವ ಡೈಲಾಗ್ ಸಕ್ಕತ್ ನಗು ತರಿಸುತ್ತದೆ.

ಚಿತ್ರದಲ್ಲೊಬ್ಬ ಹೀರೋ ಅವನು ಮಹೇಶ್ ಬಾಬು ನಂತ ಫೇಮಸ್ ಆಗಲು ಮರಿಡೇಶ್ ಬಾಬು ಅಂತ ಹೆಸರಿಟ್ಟುಕೊಳ್ಳುತ್ತಾನೆ. ನಮ್ಮ ಕೋಲಾರ ತಾಲ್ಲೂಕಿನಲ್ಲಿ ಪೂರ್ತಿ ಚಿತ್ರ ಶೂಟಿಂಗ್ ಮಾಡಿರುವುದರಿಂದ ಚಿತ್ರದಲ್ಲಿನ ರಸ್ತೆ, ಬಸ್ಸು, ಆಟೋ ಎಲ್ಲದರಲ್ಲೂ ಕನ್ನಡ ಫಲಕಗಳು ಕಾಣುತ್ತವೆ. ಬೆಂಗಳೂರು ಅಥವ ಕೋಲಾರದ ತೆಲುಗು ಭಾಷೆ ಸುಲಭವಾಗಿ ಅರ್ಥವಾಗುತ್ತದೆ.

ಈ ಚಿತ್ರದ ಅಂತ್ಯದಲ್ಲೊಂದು ಸಾಲು ಬರುತ್ತದೆ- Everyone is a film maker… at Heart.

ಇದನ್ನು ನೋಡಿದ ಮೇಲೆ, ನನ್ನ ಫೋಟೊ ಕ್ಲಿಕ್ಕಿಸುವ ಮುನ್ನ ಪುಸ್ತಕದಲ್ಲಿ ‘ತಮ್ಮ ಇಷ್ಟದ ದೃಶ್ಯಗಳಿಗೆ ಮನಸ್ಸಿನಲ್ಲಿಯೇ ಪ್ರೇಮು ಹಾಕುವವರೆಲ್ಲಾ ಛಾಯಾಗ್ರಾಹಕರೇ’ ತುಂಬಾ ದಿನಗಳ ನಂತರ ಬಂದ ಒಂದು ಪರಿಶುದ್ಧ ಮುಗ್ಧತೆಯುಳ್ಳ, ನಕ್ಕು ಹಗುರಾಗುವ ಚಿತ್ರವಿದು. ಮಿಸ್ ಮಾಡದೇ ನೋಡಿ.

‍ಲೇಖಕರು Avadhi

16 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading