ಗಜಲ್
– ಪ್ರಕಾಶ ಬಿ

ಮುಳ್ಳುಗಳೆ ತುಂಬಿದ ಲೋಕ ಸಾಕಿ
ನೆರಳೆ ಇಲ್ಲದಜಗ ನರಕ ಸಾಕಿ
ಭಾವನೆಗಳೆಲ್ಲ ಬಗೆ ಬಗೆಯ ಬಣ್ಣತೊಟ್ಟಿವೆ
ಬಿಳಿ ಬಣ್ಣಕೆ ಕಲೆ ತಾಕಿಸುವ ಖದೀಮರ ಲೋಕ ಸಾಕಿ
ಮಿಂಚು ಹುಳುವಿನ ಬೆಳಕ ಕದಿವ ಕಳ್ಳರಿವರು
ಸಂಚಿನ ಸರಳು ಹೆಣೆವ ಜನರೇ ತುಂಬಿದ ಲೋಕ ಸಾಕಿ
ಮೊಹಬತ್ಗೆ ನಶೀಬ್ ಕೇಳುವರು ಇಲ್ಲಿ
ನಾಕಾ ಬಂದಿಯಲ್ಲೂ ನುಸಳುವ ಕುಲದ ಲೋಕ ಸಾಕಿ
ಸಖಿ ಇಲ್ಲದೆ ತುಟಿ ಒಣಗುತ್ತಿವೆ ಕೇಳುವರ್ಯಾರು?
ಬಾ `ಪ್ರಕಾಶ’ನ ಮನೆ ಪಲ್ಲಂಗದಲ್ಲಿಕತ್ತಲಿಲ್ಲ ಲೋಕ ಸಾಕಿ






nice
Sir tumba channagide nimma GAZAL
ಗಜಲ್ ಲೋಕದ ಉಬರ್ತಹುಹಾ ಸಿತಾರ ಇವರು