ಮಾಳಿಂಗರಾಯ ಕೆಂಭಾವಿ
ನೀವು ಬೆಂಕಿ ಹಚ್ಚಲು ಬಂದಿದ್ದೀರೆಂದು
ನಮಗೆ ಗೊತ್ತು
ಅದಕ್ಕೆ ನಾವು ತೊಯ್ದ ಬಟ್ಟೆ ಹುಟ್ಟಿದ್ದೇವೆ.
ನಮ್ಮ ಹೊಟ್ಟೆಯ ಮೇಲೆ
ಹೊಡೆಯುತ್ತೀರೆಂದು ಗೊತ್ತು
ಹೊಟ್ಟೆ ಕಟ್ಟಿ ದುಡಿಯುತ್ತಿದ್ದೇನೆ.
ನೀವು ದ್ವೇಷ ಹರಡುತ್ತೀರೆಂದು ಗೊತ್ತು
ಅದಕ್ಕೆ ನಾವೂ ನಮ್ಮ ಹೃದಯದೊಳಗೆ
ಪ್ರೇಮಮಯ ಬುದ್ಧನನ್ನಿರಿಸಿಕೊಂಡಿದ್ದೇವೆ.
ನೀವೂ ನಮ್ಮ ಹಕ್ಕುಗಳನ್ನೂ ಕಸಿದುಕೊಳ್ಳುವಿರೆಂಬುದೂ ಗೊತ್ತು
ಅದಕ್ಕೆ ನಾವೂ ಕಾನೂನು ಮತ್ತೆ
ಸಂವಿಧಾನವನ್ನರಿಯುತಿದ್ದೇವೆ…

ನೀವು ಜಾತಿ ಭೇದ ಮಾಡುವುದೂ ಗೊತ್ತು
ಅದ್ಕೆ ನಾವು
ವಿಶ್ವ ಮಾನವರಾಗುವತ್ತ ಹೆಜ್ಜೆ ಇಡುತ್ತಿದ್ದೇನೆ.
ಕೊನೆಯ ಮಾತು ಕೇಳಿಸಿಕೊಳ್ರೋ
ನಿಮ್ಮ ಆಟಗಳೆಲ್ಲವೂ
ಅದಕ್ಕೆ ನಾವು ಒಂದಾಗುತಿದ್ದೇವೆ.






0 Comments