ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಲತಿ ಶಶಿಧರ್ ಕವಿತೆ- ಮುದ್ದಾದ ಸಂಗಾತ…

ಮಾಲತಿ ಶಶಿಧರ್

ಹಠತ್ತಾಗಿ ಹುಟ್ಟಿಕೊಂಡ ಒಲವೇ
ಅದೆಷ್ಟು ಉನ್ಮಾದ
ನನ್ನ ಬೊಗಸೆಯಲ್ಲಿ ನಿನ್ನ
ಕೋಮಲ ಮೊಗವನಿರಿಸಿದಾಗ
ನಿನ್ನ ಕಣ್ಣೊಳಗೆ ಮೆಲ್ಲಗೆ
ಕಾಲು ಜಾರುವಾಗ

ಒಳಗಿಳಿಯುತ್ತಾ ಇಳಿಯುತ್ತಾ
ತುದಿಯ ತಲುಪಿದ
ಶಿಖರ ಸುಖ
ಬೆರಳ ಬೆಸೆದ ಬಿಗಿಯಲ್ಲಿ
ಬೆಂಕಿಯ ಹಿತ
ನೀನು ದಾರಿಯೇ
ಗೊತ್ತಾಗದ ದಟ್ಟ ಕಾಡು
ನಡೆವ ನಾನು ಕಕ್ಕಾವಿಕ್ಕಿ

ಗಸ್ತು ಹೊಡೆದಾಗಲೂ
ಅದೆಂತದ್ದೋ ಗರ್ವ
ಸಾರ್ಥಕತೆ
ನಿನ್ನ ತಲುಪಿದಾಗ
ಒದ್ದೆ ಬೆವರು ಮುದ್ದು ಸುಖ

ಅರ್ಥೈಸಿಕೊಳ್ಳುತ್ತಾ
ಹೋದಷ್ಟು ಕುತೂಹಲ
ಹಂಬಲ
ಸೋಕಿದಷ್ಟು ಇಮ್ಮಡಿಸುವ
ಇರಾದೆ
ಬೇಕಲ್ಲವೇ ಹೀಗೊಂದು
ಮುದ್ದಾದ
ಪುಸ್ತಕ ಸಂಗಾತ?

‍ಲೇಖಕರು avadhi

25 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading