ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾರಕ್ಕ and ಬೋರಣ್ಣ

ಹೃದಯ ಶಿವ 

ರಾಮ ಬೆಂಕಿಗೆ ನೂಕಿದರೆ
ಬುದ್ಧ
ನಡುರಾತ್ರಿ ಬಿಟ್ಟು ಹೋದ,
ಇವರಿಬ್ಬರಿಗಿಂತಲೂ
ನನಗೆ ಆದರ್ಶವಾಗೋದು
ತನ್ನ
ಬಾಳಿನ ಕೊನೆಯಕ್ಷಣದವರೆಗೂ
ತನ್ನ ಮಡದಿ ಮಾರಕ್ಕನನ್ನು
ಪ್ರೀತಿಯಿಂದ ನೋಡಿಕೊಂಡ
ನಮ್ಮೂರಿನನಕ್ಷರಸ್ಥ
ಬೋರಣ್ಣ.

chappal filler

ಬರಗಾಲದ ಮಧ್ಯಾಹ್ನ
ಬಡಕಲು ಮುದುಕ
ಏದುಸಿರು ಬಿಡುತ್ತ ನಡೆವುದ
ಕಂಡು
ಬೋಳುಮರ
ಅಸಹಾಯಕತೆಯಿಂದ
ಆಕಾಶ ನೋಡಿತು

chappal filler

ಈ ಜಗತ್ತಿನಲ್ಲಿ ಜಾಸ್ತಿ ಉಗಿಸಿಕೊಳ್ಳುವ ಗೌರವ
ಮೈಕಿಗೆ ಸಲ್ಲುತ್ತದೆ

chappal filler

ನೆಲದ ಮೇಲೆ
ನನ್ನ ನೆರಳು ಮಲಗಿತ್ತು,
ನಾನು ಮತ್ತು ಸೂರ್ಯ
ಅಚ್ಚರಿಯಿಂದ
ನೋಡುತ್ತಾ ನಿಂತಿದ್ದೆವು.

chappal filler

ಬದುಕು ತೆರೆದಿಟ್ಟ
ಸಾವಿರ ಅಚ್ಚರಿಗಳಲ್ಲಿ
ನಿನ್ನ
ಕಣ್ಣಂಚಿನ ಮಿಂಚಿಗೆ
ಮೊದಲ ಸ್ಥಾನ

chappal filler

ಉಣ್ಣಲು ಅನ್ನವಿಲ್ಲದೇ
ಸುಮ್ಮನೆ ಕಣ್ಮುಚ್ಚಿ ಕುಳಿತಿದ್ದ
ಆ ಶಾಪಗ್ರಸ್ತ ವ್ಯಕ್ತಿಯನ್ನು
ಲೋಕ
ತಪಸ್ವಿಯೆಂದು ಕರೆಯಿತು

‍ಲೇಖಕರು Admin

21 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading