ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮಾಯಾ ಎಂಜಲೋ ಬರೆದ ಕವಿತೆ Alone ಇಷ್ಟವಾಯಿತು'

ಇಷ್ಟವಾಯಿತು’ ಅಂತ ತುಂಬು ಪ್ರೀತಿಯಿಂದ ಸ್ವರ್ಣಾ ಆ ಕವಿತೆಯನ್ನು ಅನುವಾದಿಸಿ ಕೊಟ್ಟಿದ್ದಾರೆ, ಮಾಯಾ ಈಗಾಗಲೇ     ಎಂ ಆರ್ ಕಮಲಾ ಅನುವಾದದ ಮೂಲಕ ಕನ್ನಡಕ್ಕೆ ಧಕ್ಕಿದ್ದಾರೆ. ‘ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ’ ಎನ್ನುವ ಮಾಯಾ ಆತ್ಮಕಥನ ಓದಿದವರಿಗೆ ಈ ಕವಿತೆಯೊಳಗಣ ಭಾವ ಸುಲಭವಾಗಿ ತಟ್ಟುತ್ತದೆ. ಈ ಕವಿತೆಯೊಂದಿಗೆ ಇಂಗ್ಲಿಶ್ ಮೂಲವೂ ಇದೆ. ನಿಮ್ಮ ಪರಿಶೀಲನೆಗಾಗಿ. ಸ್ವರ್ಣಾ ಒಳ್ಳೆಯ ಕವಿತೆಗಾಗಿ ಥ್ಯಾಂಕ್ಸ್

ಒಬ್ಬಂಟಿ ನೆನ್ನೆ ಹಾಗೆ ಮಲಗಿ ಯೋಚಿಸುತಿದ್ದೆ ನಾನು, ಮನಸಿಗೊಂದು ಮನೆಯ ಮಾಡುವುದೆಂತು? ಅಲ್ಲಿ, ನೀರಿಗೆ ದಾಹವಿರಬಾರದು ರೊಟ್ಟಿ ಕಲ್ಲಾಗಬಾರದು ಒಂದು ಸತ್ಯ ನನಗೆ ತಿಳಿಯಿತು ನನ್ನ ಹೊಳಹು ತಪ್ಪಲ್ಲವೆಂದು ಗೊತ್ತು ಆದರೆ ಒಬ್ಬಂಟಿಯಾಗಿ ಯಾರು ಇಲ್ಲದೆ ಒಂಟಿಯಾಗಿ ಇಲ್ಯಾರೂ ಏನೂ ಮಾಡಲಾರರು   ಯೂಸೇ ಮಾಡಲಾಗದ ನೋಟಿನೊಂದಿಗೆ, ಕೆಲವರಿಲ್ಲಿ ಕೊಟ್ಯಾಧೀಷರು ಸಾವ ಓಡಿಸುವ ಜೋಗತಿಯರಂತೆ ಸುತ್ತುತ್ತಾರೆ , ಅವರ ಹೆಂಡಂದಿರು ಆಟ ಮರೆತು ಕೂತು ಕೊರಗುತ್ತಾರೆ, ಅವರ ಮಕ್ಕಳು ಅವರ ಕಲ್ಲು ಹೃದಯಗಳ ಮಿಡಿಸಲಿದ್ದಾರೆ, ದುಬಾರಿ ವೈದ್ಯರು. ಆದರೆ  ಒಬ್ಬಂಟಿಯಾಗಿ ಯಾರು ಇಲ್ಲದೆ ಒಂಟಿಯಾಗಿ ಇಲ್ಯಾರೂ ಏನೂ ಮಾಡಲಾರರು   ನೀವೀಗ ಗಮನವಿಟ್ಟು ಕೇಳುವುದಾದರೆ, ನನಗೆ ತಿಳಿದ  ಸತ್ಯ  ಹೇಳುವೆ ನಾನು , ಕರಿ ಮೋಡ ಮುಸುಕುತ್ತಿದೆ, ಬಿರುಗಾಳಿ ಬೀಸುತ್ತದೆ, ಮಾನವ ಜನಾಂಗ ನೋವಿನಲ್ಲಿ ಮುನುಗುವುದು, ನನಗೆ ಕೇಳುತ್ತಿದೆ ! ಏಕೆಂದರೆ ಒಬ್ಬಂಟಿಯಾಗಿ ಯಾರು ಇಲ್ಲದೆ ಒಂಟಿಯಾಗಿ ಇಲ್ಯಾರೂ ಏನೂ ಮಾಡಲಾರರು **
Alone 

  Lying, thinking Last night How to find my soul a home Where water is not thirsty And bread loaf is not stone I came up with one thing And I don’t believe I’m wrong That nobody, But nobody Can make it out here alone.   Alone, all alone Nobody, but nobody Can make it out here alone.   There are some millionaires With money they can’t use Their wives run round like banshees Their children sing the blues They’ve got expensive doctors To cure their hearts of stone. But nobody No, nobody Can make it out here alone.   Alone, all alone Nobody, but nobody Can make it out here alone.   Now if you listen closely I’ll tell you what I know Storm clouds are gathering The wind is gonna blow The race of man is suffering And I can hear the moan, ‘Cause nobody, But nobody Can make it out here alone.   Alone, all alone Nobody, but nobody Can make it out here alone.    
Maya Angelou
]]>

‍ಲೇಖಕರು G

21 February, 2012

1 Comment

  1. Sunaath

    ಮಾಯಾ ಎಂಜೆಲೊ ಅವರ ಸುಂದರವಾದ ಕವನವನ್ನು, ಅಷ್ಟೇ ಸುಂದರವಾಗಿ ಕನ್ನಡಿಸಿದ ಸ್ವರ್ಣಾ ಅವರ ಕವನವನ್ನು ಓದಿ ಖುಶಿಯಾಯಿತು. ಮಾಯಾ ಎಂಜೆಲೊ ಅವರ ಸಣ್ಣ ಪರಿಚಯ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading