ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾತು ಮೌನಗಳ ನಡುವೆ…

ಶಬ್ಧಗಳು ಏನನ್ನು ಹೇಳಿಯಾವು?

ಭಾರತಿ ಬಿ ವಿ

 

ಸ್ಪರ್ಶವೊಂದರ ನೆನಪಲ್ಲಿ

ಮೂಡಿದ ನಗು,

ಜೇನು ದನಿ ಆಡಿ ಮುಗಿದ

ನಂತರವೂ ಮೊರೆವ ಪರಿ

ಇದನ್ನೆಲ್ಲ ಹೇಗೆ ಹೇಳಲಿ ಹೇಳು !

ಮೌನಕ್ಕೆ ನೀ ತೊಡಿಸಿದ

ಮಾತಿನರಿವೆ ಕಿತ್ತೆಸೆವೆ …

ಬೆತ್ತಲು ಮೌನದೊಡನೆ

ರತಿಕ್ರೀಡೆಯಾಡಲು ಬಿಡು!

 

ಎದೆಯೊಳಗೆ ಎಲ್ಲರಿದ್ದೂ

ಉಳಿದ ಏಕಾಂಗಿತನದಲಿ

ನನ್ನಲಿ ನಾನಾಡಿಕೊಂಡಿದ್ದು

ನಿನಗೆ ಯಾಕೆ ತಿಳಿಯಬೇಕು!

ತಿಳಿದು ತಿಳಿಯ ಯಾಕೆ

ರಾಡಿಯೆಬ್ಬಿಸಬೇಕು ?

 

ಕೆಲವನ್ನು ಹೇಳಲಾಗುವುದಿಲ್ಲ,

ಕೆಲವನ್ನು ಹೇಳುವುದು ಬೇಕಿಲ್ಲ

ಬಿಡು ಸುಮ್ಮನೆ ನನ್ನನು

ನನ್ನ ಮೌನದೊಡನೆ,

ನಾವಿಬ್ಬರೂ ಹೇಳಿಕೊಳ್ಳುವುದು

ಅದೆಷ್ಟೊಂದು ಬಾಕಿ ಉಳಿದಿದೆ.

 

 ]]>

‍ಲೇಖಕರು G

27 July, 2012

4 Comments

  1. N.viswanatha

    Shabdhadodane badukabahudu-mounadodane jasthi kala sadhyavilla

  2. D.Ravi varma

    ಕೆಲವನ್ನು ಹೇಳಲಾಗುವುದಿಲ್ಲ,
    ಕೆಲವನ್ನು ಹೇಳುವುದು ಬೇಕಿಲ್ಲ
    ಬಿಡು ಸುಮ್ಮನೆ ನನ್ನನು
    ನನ್ನ ಮೌನದೊಡನೆ,
    ನಾವಿಬ್ಬರೂ ಹೇಳಿಕೊಳ್ಳುವುದು
    ಅದೆಷ್ಟೊಂದು ಬಾಕಿ ಉಳಿದಿದೆ.
    madam, ii saalugalu tumbaa apyayamanavaagive.
    hiriyaru helida haage “maatu belli, mouna bangaara” halavomme
    ondu mouna nammannu bere lokakke kondyyuttade.
    nimma baraha nanage tumbaa kushi koduttade.
    sravanada shubhashayagalu
    Ravi varma hosapete

  3. N.viswanatha

    Nanna anisikeyalli manushya dukkadalliddagalanthoo maunavannu muriyalebeku.Illadiddalli dukka jasthiyaguttale hoguttade

  4. -ರವಿ ಮುರ್ನಾಡು,

    ಮೌನ ಎಲ್ಲವೂ ಆಗಬಹುದು. ಮುಚ್ಚಿದರೂ ತೆರೆದಂತೆ , ತೆರೆದರೂ ಮುಚ್ಚಿದಂತೆ. ಈ ಕವಿತೆಯಲ್ಲಿ ಬರುವ ಸಾಲುಗಳು ಕಲವೊಮ್ಮೆ ಮೌನದ ಆವೇಷದ೦ತೆ,ಸೌಮ್ಯತೆಯ೦ತೆ ,ಹೇಳಲಾಗದ್ದನ್ನು ಮುಚ್ಚು ಮರೆಯಿಲ್ಲದೆ ಹೇಳಿದಂತೆ ಗೆಜ್ಜೆ ಕಟಕಟಾಯಿಸಿದೆ. ಕೆಲವು ಭಾವಗಳನ್ನು ಗಂಡು ಹೆಣ್ಣಿನಂತೆ , ಅದೇ ರೀತಿ ಹೆಣ್ಣು ಗ೦ಡಿನಂತೆಯು ತೆರೆಯಲು ಸಾಧ್ಯವಿಲ್ಲ. ಆದರೆ ಇಬ್ಬರಿಗೂ ಇದು ಅವರವರ ದಾಟಿಯಲ್ಲಿ ಆಪ್ತವಾಗುವುದು. ಕೆಲವರು ಕೇಳಿದಂತೆ ಮೌನ ಏಕೆ ಮಾತಾಡುವುದಿಲ್ಲ, ಏಕೆ ಮಾತಾಡುತ್ತದೆ? ಏಕೆಂದರೆ ಅದು ಮಾತಾಡುತ್ತಲೇ ಇರುತ್ತದೆ, ಆದರೆ ಕೇಳುವವರಿಗೆ ಕೇಳಿಸುತ್ತಲೇ ಇರುತ್ತದೆ. ಇಲ್ಲಿ ಬರುವ ಭಾವಗಳು ಆಳವಾಗಿ ಮಾತಾಡುತ್ತದೆ. ಓದುವಾಗ ಪದಗಳನ್ನು ಇನ್ನಷ್ಟು ಕಡಿಮೆ ಮಾಡಿ ಭಾವಗಳನ್ನು ಹಿಡಿದಿಡಬೇಕೆನಿಸಿತು.ಇನ್ನಷ್ಟು ಮೌನ ಮಾತಾಡಿದರೆ ಇದು ಉತ್ತಮ ಕವಿತೆಯ ಸಾಲಿಗೆ ಸೇರುವುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading