ಡೋರ
ಮಾತು ಮುಗಿದೇ ಇಲ್ಲ ಇನ್ನು
ಮರೆತು ಎದ್ದು ಹೋದೆಯಾ…?
ಹರಸಿ ನಡೆದೆ ಬಿಟ್ಟೆಯಾ
ಕಾಣದೂರಿನ ದಾರಿ ಹಿಡಿದು
ನನ್ನ ಹೀಗೆ ಯಾಕೊ ತೊರೆದು
ಹುಡಕಲೇಗೆ ನಿನ್ನನು

ಕಾದೆ ನಾನು ಬರುವವರೆಗು
ಕೊನೆ ಕ್ಷಣದಲು ಉಸಿರ ತಡೆದು
ಈ ನೆತ್ತಿ ಮೇಲೆ ಕೈಯ ಸೋಕಿ
ಹರಸಿ ನಡೆಯೇ ಬಿಟ್ಟೆಯಾ….
ಬೇಡಲ್ಯಾರ ಕೈಯ ತುತ್ತು,
ಕಾಡಿದಾಗ ಹಸಿವ ನೋವು
ಕಾಯಲ್ಯಾರಿಗೆ ಕದವ ತರೆದು,
ಸಂಜೆ ಹೀಗೆ ಮುಳುಗಿದಾಗ
ಒರೆಸಲ್ಯಾರ ಬೆವರ ಹನಿಯ
ದುಡಿದ ತಣಿದು ಬರುವ ವೇಳೆ
ಒರಗಲೇಳು ಯಾರ ಎದೆಗೆ,
ಮರೆಯಲೆನ್ನ ನೋವನು!
ಹಸಿದುಕೊಂಡೆ ದುಡಿದೆ ಅನ್ನ
ತುಂಬಲೆಮಗೆ ಪ್ರೀತಿಯನ್ನ
ಮರಣನೋವ ಮರೆಯಮಾಚಿ
ಹುಸಿನಗೆಯನು ಮಾಡುತಾ
ಕಣ್ಣಿಗಪ್ಪಿಕೊಂಡೆ ಎನ್ನ,
ಹರೆಸಿ ನಡೆದೇ ಬಿಟ್ಟೆಯಾ

ನಾ ದೇವರೆನ್ನಲೇಕೆ ನಿನ್ನ ಬೇಡಿದನ್ನೇ ನೀಡುವ
ಬೇಡದಿರದೆ ಯೋಗ್ಯವಿರದೆ ದೀಪವಿಡದೆ ಇದ್ದರೂ
ಸರ್ವಸ್ವವನ್ನೂ ಇಟ್ಟೇ ನೀ
ಸರ್ವವನ್ನೇ ಕೊಟ್ಟೆ ನೀ
ನೀ ನನ್ನ ಅಪ್ಪನು
ಹರಸಿ ನಡೆದೇ ಬಿಟ್ಟೆಯಾ
ಕಳಿಸಬೇಕು ಅಂಚೆಯೊಂದು
ಮಾತು ಮುಗಿದೇ ಇಲ್ಲ ಇನ್ನು
ಮರೆತು ಎದ್ದು ಹೋದೆಯಾ
ಹುಡುಕಲೇಗೆ ನಿನ್ನನು..?






0 Comments