ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮಾತುಗಳೆಲ್ಲಾ ಮಾರ್ದನಿಯಾಗಿ ಮೌನಗಳಾಗಲೇ ಮಾತುಗಳಾಗಿ..' ದಿವ್ಯಾ ಆಂಜನಪ್ಪ

ಜೀವಂತ ಪುತ್ಥಳಿ

ದಿವ್ಯ ಆಂಜನಪ್ಪ

ಈ ದಿನವೆಲ್ಲಾ ಮಂಪರು ಮದಿರೆ
ಸುರುಳಿ ಗುಂಗಲಿ ಕಳೆದೆ ನನ್ನನೇ
ಸೆಳೆವ ಬೆಳಕ ಬಿಟ್ಟು ಇನ್ನೆಷ್ಟು ಓಡಲಿ
ಸುತ್ತಿ ಬರುವುದು ನಿನ್ನದೇ ಛಾಯೆ!
 
ಮಾತುಗಳೆಲ್ಲಾ ಮಾರ್ದನಿಯಾಗಿ
ಮೌನಗಳಾಗಲೇ ಮಾತುಗಳಾಗಿ
ದಿನ ಕಳೆದಿದೆ ಈ ಮನವೂ ಕಳೆದು
ಸುತ್ತಿ ಬರುವಾಗೊಮ್ಮೆ
ನೀ ತಂದು ಬಿಡು ಹೀಗೆ!

ಏನೇ ಹೇಳು ಈ ವಯಸ್ಸೇ ಹಾಗೆ
ಕನಸು ಹೆಚ್ಚು ಕನವರಿಕೆಯ ಹುಚ್ಚು
ಆದರೂ ನೆನಪಿದೆ ನಾ ಯಾರೆಂದು
ಶಾಪಗಳೊಳಗಿಹ ಸುಂದರ ‘ಕಲ್ಪನೆ’
ಈಗದು ನಿನ್ನದೇ ಆಗಿದೆ..!
 
ಸೋಜಿಗ, ಕಾತುರತೆಗಳ ಸಂಕಲನವು
ನಿನ್ನ ಕಲ್ಪನೆಯು ಅಮೋಘವೆ ಸರಿಯೇ
ಅಗತ್ಯವಾಗಿ ಅರಿತು ನೋಡು
ಮತ್ತಷ್ಟು ಆಳದ ವಿಸ್ಮಯಗಳು
 
ವಿಷಾದವಿದೆ, ಆಕಾಂಕ್ಷೆಗಳೂ
ಕಲ್ಪನೆಯ ಈ ಜೀವಂತ ಪುತ್ಥಳಿಗೆ
ಕಲ್ಪನೆಗಳ ಕೊನೆಯೇ ಕಾಣಿಸಿಲ್ಲ
ಕಾಣದ ಆ ದೇವನೂ ಸೋತು
 

‍ಲೇಖಕರು G

18 March, 2015

3 Comments

  1. bidaloti ranganath

    Fine

  2. mmshaik

    good one..divya!!!!

  3. ದಿವ್ಯ ಆಂಜನಪ್ಪ

    thank u bidaloti ranganath sir, mmshaik sir 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading