ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾತಾಡುತ್ತಲೇ ಇದ್ದಾಳೆ..

ಕು ಸ ಮಧುಸೂದನ್ 

ಜೊತೆಗಿದ್ದವರೆಲ್ಲ ಎದ್ದು ಹೋದರೂ

ಒಂಟಿ ಕಾಲಲ್ಲೇ ನಿಂತು

ಮಾತಾಡುತ್ತಲೇ ಇದ್ದಾಳೆ

ಅವನು ಪರಿಚಯಿಸಿದ ನಕ್ಷತ್ರಗಳ ಜೊತೆಗೆ

 

ಮುಗಿದ  ಇರುಳಿಗೆ ತೆರೆದು ಬಾಗಿಲು

ಬಂದಹಗಲಿನಲ್ಲೂ

ಮಾತಾಡುತ್ತಲೇಇದ್ದಾಳೆ

ಅವನು  ಬಿಟ್ಟು ಹೋದ ಏಕಾಂತದ ಜೊತೆಗೆ.

 

ಅಸ್ಥವ್ಯಸ್ಥವಾದ ಹಾಸಿಗೆ ದಿಂಬುಗಳ

ಹೊದಿಕೆಗಳ ಬದಲಿಸುತ್ತ

ಮಾತಾಡುತ್ತಿದ್ದಾಳೆ

ಉಟ್ಟ ಬಟ್ಟೆಗಳು ಮುಚ್ಚಿಟ್ಟ ಗುಟ್ಟುಗಳ

ರಟ್ಟಾಗಿಸಿದಾ ನಸುಗತ್ತಲಲಿ ಮೀಯುತ್ತಿರುವ ಕೊಣೆಯ ಜೊತೆಗೆ

ಕೊನೆಯಿರದ ಕಡಲತಡಿಯಕತ್ತಲಲಿ

ಕಡುಗಪ್ಪಾದ ನೀಲಿಯ ನೆನಸಿಕೊಂಡು

ಮಾತಾಡುತ್ತಲೇ ಇದ್ದಾಳೆ

ತೆರೆಗಳಜೊತೆ

 

ಉಣ್ನುವಾಗ ನೆತ್ತಿಗೇರಿ ಬಿಕ್ಕಳಿಸಿದವನ

ತಲೆ ತಟ್ಟಿ ನೀರು ಕುಡಿಸಿ

ಬೀಳ್ಕೊಟ್ಟವಳಿನ್ನೂ ಮಾತಾಡುತ್ತಲೇ ಇದ್ದಾಳೆ

ಎದ್ದು ಹೋದವಹೆಜ್ಜೆ ಗುರುತು

ಉಳಿಸಿದ ಹಾದಿಯ ಜೊತೆಗೆ

‍ಲೇಖಕರು avadhi

1 December, 2019

2 Comments

  1. T S SHRAVANA KUMARI

    ಚೆನ್ನಾಗಿದೆ.

    • ಕು.ಸ.ಮಧುಸೂದನ್ ರಂಗೇನಹಳ್ಳಿ

      ದನ್ಯವಾದ ಮೇಡಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading