ಜಯಶ್ರೀ ಬಿ ಕದ್ರಿ

ಮಾಗಿಯ ಚಳಿಯೆಂದರೆ
ಬೆಚ್ಚನೆಯ ನೆನಪುಗಳು
ಎದೆಯ ತಾಕುವ ಸಮಯ
ಮುಗಿಲ ಮಲ್ಲಿಗೆ ಹೂವು
ಹಸಿಯ ಮಣ್ಣಲ್ಲಿ
ಟಿಸಿಲೊಡೆದು ತೊನೆವ ಸಮಯ
ಮಂದ ಮಾರುತಕು ಲಜ್ಜೆ
ಕಂಪಿಸುವ ಮೌನ
ಬಾನಿಗೂ ಭೂಮಿಗೂ
ನಲ್ಮೆ
ಮಾಗಿಯ ಚಳಿಯೆಂದರೆ
ಕೊರೆವ ಶೈತ್ಯದಲು
ಹಿಮದ ಬೆಳ್ಳನೆ ಮಂಜು
ಸುರಿವ ಕಾಲ
ಮಾಗಿಯ ಚಳಿಯೆಂದರೆ
ಹೂವುಗಳು ಉದುರಿದರೂ
ಕಂಪು ಪಸರಿಸುವ
ಸಮಯ






very nice..madam..naviru bhaavada naviru kavite….
Eshtavaytu mam kavite
What an imagination
ಚೆನ್ನಾಗಿದೆ
wav…!wonderful poem..