ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಂಟೋ ಹೇಳಿದ..

ಸಾದತ್ ಹಸನ್ ಮಾಂಟೋ

ಕನ್ನಡಕ್ಕೆ: ಚಿದಂಬರ ನರೇಂದ್ರ 

ಹಿಂದುಸ್ತಾನ್ ಜಿಂದಾಬಾದ್
ಪಾಕಿಸ್ತಾನ್ ಜಿಂದಾಬಾದ್
ಎಂದು ಕೂಗುತ್ತ, ಚೀರುತ್ತ ಸಾಗಿರುವ
ಘೋಷಣೆಗಳ ನಡುವೆ
ಬೇಕಾದಷ್ಟು ಪ್ರಶ್ನೆಗಳಿದ್ದವು.

ಯಾವುದನ್ನ ನನ್ನ ದೇಶ ಅಂತ ಹೇಳಲಿ?
ಜನ ಯಾಕೆ ಹೀಗೆ ಒಬ್ಬರಾದ ಮೇಲೊಬ್ಬರು ಸಾಯುತ್ತಿದ್ದಾರೆ?
ಈ ಪ್ರಶ್ನೆಗಳಿಗೆ ಕೆಲವು ನಿರ್ಧಿಷ್ಟ ಉತ್ತರಗಳಿವೆ
ಕೆಲವು ಹಿಂದುಸ್ತಾನಿ ಉತ್ತರಗಳು
ಕೆಲವು ಪಾಕಿಸ್ತಾನಿ ಉತ್ತರಗಳು
ಕೆಲವು ಹಿಂದೂ ಉತ್ತರಗಳು
ಕೆಲವು ಮುಸ್ಲಿಂ ಉತ್ತರಗಳು
ಕೆಲವರು ಉತ್ತರಗಳನ್ನ 1857 ರ ಪಾಳುಬಿದ್ದ ಇತಿಹಾಸದಲ್ಲಿ ಹುಡುಕಿದರೆ
ಇನ್ನೂ ಕೆಲವರು ಮೊಘಲ್ ಆಡಳಿತದ ಅವಶೇಷಗಳಲ್ಲಿ .

ಎಲ್ಲ ಹಿಂದೆ ಹೋಗಿ ಹುಡುಕುತ್ತಿದ್ದಾರೆ
ಆದರೆ ಇವತ್ತಿನ ಕೊಲೆಗಾರ
ರಕ್ತ ಮತ್ತು ಚೂರಿಗಳಿಂದ ಭವಿಷ್ಯ ಬರೆಯುತ್ತಿದ್ದಾನೆ

ಈ ಸುದ್ದಿ ಹೇಳುತ್ತ ಹೇಳುತ್ತ
ನಿಮ್ಮ ಕಲ್ಲೇಟುಗಳನ್ನ ಬೇಕಾದರೆ ಸಹಿಸಬಲ್ಲೆ

ಆದರೆ ಹಿಂದೂ- ಮುಸ್ಲಿಂ ದಂಗೆಯಲ್ಲಿ
ಯಾರಾದರೂ ನನ್ನ ತಲೆ ಒಡೆದರೆ
ನನ್ನ ರಕ್ತದ ಪ್ರತಿ ಹನಿಯೂ ಕಣ್ಣೀರಿನಲ್ಲಿ ಕೈ ತೊಳೆಯುತ್ತದೆ.

ನಾನೊಬ್ಬ ಕಲಾವಿದ
ನನಗೆ ದುಷ್ಟ ಗಾಯಗಳು ಮತ್ತು
ಕೊಳಕು ಕಲೆಗಳು ಇಷ್ಟವಿಲ್ಲ.

 

‍ಲೇಖಕರು avadhi

27 April, 2018

1 Comment

  1. Nasrin

    Nice..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading