ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮಾಂಕ್ ಅಂಡ್ ಗನ್’ ಬಗ್ಗೆ ಎಚ್ಚರ ಇರಲಿ

ಜಿ ಎನ್ ನಾಗರಾಜ್

**

ಬಹಳ ಜನ ಮುಗಿಬಿದ್ದು ‘ಮಾಂಕ್ ಅಂಡ್ ಗನ್’ ನೋಡುತ್ತಿದ್ದಾರೆ. ನೋಡುಗರಿಗೆ ಒಳ್ಳೆಯ ಮನರಂಜನೆ ನೀಡುವ ಚಿತ್ರ ಬಹಳ ಸೃಜನಾತ್ಮಕವಾಗಿ ಚಿತ್ರವನ್ನು ರೂಪಿಸಲಾಗಿದೆ.

ಚಿತ್ರಕಥೆ ಬಹಳ ಜನ ಪ್ರಗತಿಪರರನ್ನು ಸೆಳೆಯುವಂತಹ ವಿಷಯಗಳನ್ನು ಒಳಗೊಂಡು ಬರೆಯಲಾಗಿದೆ. ಪ್ರಜಾಪ್ರಭುತ್ವ ಈಗ ಭಾರತದಲ್ಲಿ ಜಾರಿಯಲ್ಲಿರುವ ರೂಪವನ್ನು, ಅದರ ಅವಗುಣಗಳನ್ನು ಹಾಸ್ಯ ಮಾಡಿರುವುದು, ದುರಾಸೆ ಇಲ್ಲದಿರುವುದು, ಹಣದ ಹಿಂದೆ ಬೀಳದಿರುವುದು ಶಸ್ತ್ರಾಸ್ತ್ರಗಳು ಯುದ್ಧಗಳಿಗೆ ಎದುರಾಗಿ ಬುದ್ಧನ ಅಹಿಂಸೆಯನ್ನು ಪರಿಹಾರವಾಗಿ ಸೂಚಿಸಿರುವುದು ಇಂತಹ ಅಂಶಗಳು ನೋಡುಗರನ್ನು ಸೆಳೆಯುತ್ತಿದೆ.

ಆದರೆ ಅದೇ ಸಮಯದಲ್ಲಿ ನಾನು ಸಿನಿಮಾ ಮುಗಿದ ತಕ್ಷಣ ಹಲವರಿಗೆ ಹೇಳಿದಂತೆ ಈ ಸಿನಿಮಾ imaginatively anti democratic, hilariously anti democratic.

ಏಕೆಂದರೆ ಇದು ಪ್ರಜಾಪ್ರಭುತ್ವವನ್ನು ಹೀಗಳೆಯುತ್ತಾ ರಾಜಪ್ರಭುತ್ವವನ್ನು ಎತ್ತಿ ಹಿಡಿಯುತ್ತದೆ. ಪ್ರಜಾ ಪ್ರಭುತ್ವ ಎಂಬುದು ವಿಶ್ವದ ಇತಿಹಾಸದಲ್ಲಿ ಒಂದು ಬಹುದೊಡ್ಡ ಸಾಧನೆ. ರಾಜಪ್ರಭುತ್ವಕ್ಕೆ ಹೋಲಿಸಿದರೆ ಬಹಳ ಮುಂದುವರೆದ ವ್ಯವಸ್ಥೆ ಎಂಬುದನ್ನು ಮರೆಮಾಚುತ್ತದೆ. ಈ ಸಿನಿಮಾ ಮುಂದಿಡುವ ವಿಚಾರ ಸರಣಿ ಇಂದಿನ ಭಾರತದ ಆಳುವವರಿಗೆ ಬಹಳ ಪ್ರಿಯವಾದದ್ದು.

ಭಾರತದಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸಿ ಫ್ಯಾಸಿಸ್ಟ್ ಪ್ರಭುತ್ವವನ್ನು ಹೇರ ಬಯಸುತ್ತಿರುವವರಿಗೆ ಬಹಳ ಸಂತೋಷ ತರುವಂತದ್ದು. ಈ ಅಂಶವನ್ನು ನೋಡುಗರೆಲ್ಲರೂ ಗಮನಿಸಬೇಕು ಅಂತಹ ಚಿಂತನೆಗೆ ಸೆಳೆಯಲ್ಪಡುವುದರ ಬಗ್ಗೆ ಎಚ್ಚರದಿಂದ ಇರಬೇಕು.
ಇದು ಸಂಕ್ಷಿಪ್ತವಾಗಿ ನನ್ನ ಅನಿಸಿಕೆ.

‍ಲೇಖಕರು avadhi

7 March, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading