ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳೆ ಸುರಿದದ್ದಷ್ಟೇ ನಿಜ…

ಮಳೆ ಸುರಿದದ್ದಷ್ಟೇ ನಿಜ

– ಸುಖೇಶ್

ಅಸ೦ಗತ

ರೆಪ್ಪೆ ಮುಚ್ಚಿ ತೆರೆವಷ್ಟರಲ್ಲಿ ಕಳ್ಳ ಮಳೆಯೊಂದು ಇಣುಕಿ ಮರೆಯಾಯ್ತು ಹನಿಗಳಲ್ಲಿ ಮೂಡಿದ ಬಿಂಬಗಳಲ್ಲಿ ಅವಳ ಮುಂಗುರುಳು ಬಣ್ಣ ಬಣ್ಣ – ಜೊತೆ ನಡೆವಾಗ ಸಿಲೋನ್ ರೇಡಿಯೋದಲ್ಲಿ ಮುಖೇಶ್ ರಫಿ ಕಿಶೋರ್ ನಿಯಾನ್ ದೀಪಗಳಡಿ ಸಣ್ಣಗೆ ನಾಚಿದ ಹನಿಗಳಿಗೆ ಮಳೆ ಅಂತ ಹೆಸರಿಟ್ಟೆ – ಅವಳ ತುಟಿ ಮೇಲೆ ಬಿದ್ದ ಹನಿಯೊಂದು ಆವಿಯಾಗಿ ಮೋಡ ಸೇರಿ ಬಿಟ್ಟಿತು ಹನಿಯೊಂದ ಕಳಕೊಂಡ ನಾ ನೆನಪುಗಳ ಸೇರಿಬಿಟ್ಟಿದ್ದೇನೆ – ಇರುಸಲು ಹೊಡೆವ ಮಳೆಗೆ ಹದಾ ಸುಟ್ಟ ಹಪ್ಪಳ ಹಬೆಯಾಡೋ ಕಾಫಿ… ಬೇಡ ಬಿಡು ನಿನ್ನ ನೆನಪುಗಳೇ ಬೆಚ್ಚಗಿವೆ – ಮಳೆಗಾಗಿ ಕಾದದ್ದು ಹೆಚ್ಚೋ ನಿನಗಾಗಿ ಕಾದದ್ದು ಹೆಚ್ಚೋ ಗೊತ್ತಿಲ್ಲ ಮಳೆ ಸುರಿದದ್ದಷ್ಟೇ ನಿಜ]]>

‍ಲೇಖಕರು G

2 May, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading