ಯಜ್ಞೇಶ್ ‘ಜೀವನವನ್ನು ಸಾದ್ಯವಾದಷ್ಟು ಸಮ ಪ್ರಮಾಣದಲ್ಲಿ ನೋಡುವ ಆಸೆ ಹೊತ್ತ ವ್ಯಕ್ತಿ. ಮಲೆನಾಡಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದು ಕೆಲವು ವರ್ಷಗಳಿಂದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ. ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಘಟನೆಯಲ್ಲಿ ಆಸಕ್ತಿ’ ಹೊಂದಿರುವವರು.
ಸದ್ದಿಲ್ಲದೇ ಕಾಡುವ ಹಾಡುಗಳ ಹಾಗೂ ಹಲವು ಯು ಟ್ಯೂಬ್ ಸಂಗ್ರಹವನ್ನು ನಮ್ಮೆದುರು ಇಟ್ಟಿದ್ದಾರೆ ತಮ್ಮ ‘ಸಂಗ್ರಹ’ ಬ್ಲಾಗ್ ನಲ್ಲಿ. ಮನಸ್ಸು ಮುದುಡಿದಾಗ, ಖುಷಿಯಿಂದ ಕುಣಿದಾಗ ಭೇಟಿ ನೀಡಲೇಬೇಕಾದ ಬ್ಲಾಗ್ ಇದು. ಇಲ್ಲಿ ಎಲ್ಲಾ ಭಾವಕ್ಕೂ ಹೊಂದುವ ಹಾಡುಗಳಿವೆ.
ಈಗ ಮಳೆ ಆಲ್ವಾ.. ಅದಕ್ಕೆ ಹೊಂದುವ ಈ ಹಾಡು ನಿಮಗಾಗಿ…
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದೂ ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲೀ ಹೇಳಲು ಬರಬಹುದೆ
ನಿನ ನೋಡಿದ ಮೇಲೆಯು ಪ್ರೀತಿಯಲಿ ಬೀಳದೆ ಇರಬಹುದೆ
ಕಣ್ಣಲಿ ಮೂಡಿದೆ ಹನಿಗವನ ಕಾಯಿಸಿ ನೀ ಕಾಡಿದರೆ
ನೂತನ ಬಾವದ ಆಗಮನ ನೀ ಬಿಡದೇ ನೋಡಿದರೆ
ನಿನ ಧ್ಯಾನದಿ ನಿನ್ನಯ ತೋಳಿನಲಿ ಹೀಗೆಯೆ ಇರಬಹುದೆ
ಈ ಧ್ಯಾನವ ಕಂಡರೆ ದೇವರಿಗೂ ಕೋಪವು ಬರಬಹುದೆ
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ…
ನೆನಪಿನ ಹೂಗಳ ಬಿಸಣಿಗೆ ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ ನೀ ಇರುವ ಊರಿನಲಿ
ಅನುಮಾನವೆ ಇಲ್ಲವೆ ಕನಸಿನಲಿ ಮೆಲ್ಲಗೆ ಬರಬಹುದೆ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೆ
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ..





ಅವಧಿಯಲ್ಲಿ ಸಂಗ್ರಹದ ಬಗ್ಗೆ ಬರೆದಿದ್ದಕ್ಕೆ ಧನ್ಯವಾದಗಳು