Three-some
ದಾದಾಪೀರ್ ಜೈಮನ್
ಒಂದು ನಗರ
ಎರಡು ಹಕ್ಕಿ
ಪುಟ್ಟದೊಂದು ಗೂಡು ಕಟ್ಟಿ
ಒಳಗೆ ಭೂಮಿ ಬಾನಿನಂತೆ
ಸನಿಹದಲ್ಲಿ ಸಹಜವಾಗಿ
ಮುದ್ದು ಮಾಡುತಿದ್ದರು;
ತೆರೆದ ಬಾಳುತಿದ್ದರು;
ಒಂದು ದ್ವೀಪ
ಎರಡು ಜೀವ
ಪ್ರೇಮ-ಕಾಮವೆಂಬವೆರಡು
ಆತ್ಮ-ದೇಹ ಬೇನೆಯಾಗಿ
ಮೋಹಗೊಂಡು ಮೋಡ ಕಟ್ಟಿ
ಬಯಕೆ ಬೆಸುಗೆ ಮಳೆಯು ಸುರಿದು
ಬೆಳಕು ಮಳೆಯ ಹನಿಯ ಚದುರಿ
ಮಳೆಯಬಿಲ್ಲು ಮೂಡಿತು

ಒಂದು ಚಿತ್ರ
ಹಲವು ಬಣ್ಣ
ಸೂರ್ಯ ಚಂದ್ರ ತಾರೆ ಸಣ್ಣ
ಮಧ್ಯೆ ಬೀಸೊ ಗಾಳಿ ವೇಳೆ
ಕೆಳಗೆ ಬನದ ಮರದ ನೆರಳು
ಹರಿವ ನದಿಯ ದಂಡೆ ಮರಳು
ಒಟ್ಟು ಕೊಟ್ಟು ಪಡೆಯುತಿದ್ದರು
ಮುಕ್ತ ಮುಕ್ತವಾಗುತಿದ್ದರು






ಪದ್ಯ ಚೆನ್ನಾಗಿದೆ ಸರ್
ಚೆನ್ನಾಗಿದೆ ಕವಿತೆ. ಭರವಸೆ ಮೂಡಿಸಿದ .ಕವಿಗೆ ತುಂಬುಮನದ ಅಭಿನಂದನೆಗಳು.