ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಲಿಗೆ ಕವಿಗಳಿಗಾಗಿ ಒಂದು Selfi, ಎರಡು ಕವನ

ಅಮೆರಿಕಾದ North Carolina ದಿಂದ ಅನಿಲ್ ತಾಳಿಕೋಟೆ Anil_KSN

ನೂರೊಂದು ನಮನ!
—————–
ನೂರೊಂದು ಮಲ್ಲಿಗೆಯ ಮೊಗ್ಗು
ಅರಳಿದಾಗ ಎಷ್ಟೊಂದು ಹಿಗ್ಗು
ಘಮ ಘಮಿಸುವ ಸೊಬಗು
ಪುಟ ಪುಟದಲ್ಲೂ ತುಂಬಿಹ ಬೆರಗು!

ಹೂ ಅರಳುವದೇತಕ್ಕೆ?
ದುಂಬಿ ಸೆಳೆಯುವದಕ್ಕೋ?
ದೇವನರ್ಪಣೆಗೋ?
ಮುಡಿಯಲ್ಲಡಗುವದಕ್ಕೋ?
ಮನುಜನಭ್ಯುದಯಕ್ಕೋ?
ಅವೆಲ್ಲಾ ಉಪ ಉತ್ಪತ್ತಿಗಳಷ್ಟೆ.
ಅರಳುವದದರ ಗುಣಧರ್ಮ
ಅದುವೆ ಅದರ ಕರ್ಮ
ಬೇರೆನಿಲ್ಲ ಮರ್ಮ!

ಚೆಲುವು, ಒಲವು
ಸಹಜವಾದಾಗಲೇ
ಮಾನವನ ಗೆಲವು
ಕೋರಿಕೆ, ತೋರಿಕೆ
ಅಸಹಜವಾದಾಗಲೇ
ಮನವನ ಸೋಲು!

ಸಹಜಸಂಜಾತ
ಕೆ.ಎಸ್.ನರಸಿಂಹಸ್ವಾಮಿಗೆ
ನೂರೊಂದು ನಮನ!

mallige cart

ಒಲವಿನ ಜಂಗಮ
bidaloti ranganath

 

 

 

 

 

 

ಬಿದಲೋಟಿ ರಂಗನಾಥ್

ನಿನ್ನೊಡಲ ಮನಸ್ಸಿಗೆ
ಸೆರೆ ಸಿಕ್ಕ ಪದಗಳೇಲ್ಲಾ ಕವನಗಳಾಗಿ
ಒಲವೇ ಜೀವನವೆಂದು ಬದುಕಿದ ಕವಿ ಮಹಾಶಯನೇ ನೀನು ಚಲ್ಲಿದ ಮಲ್ಲಿಗೆ ಘಮದ ವಾಸನೆ
ಇನ್ನೂ ನಿಂತಿಲ್ಲ.

ಮನೆಗೊಂದು ಮಲ್ಲಿಗೆ
ಇದ್ದೇ ಇದೆ
ಒಲವಿನ ಆಸರೆಗೆ ಸಾಕ್ಷಾತ್ಕಾರವದು
ಬದುಕಿದ್ದ ಕಾಲದಗಕ್ಕೂ
ಪ್ರೇಮದ ಮೊಗ್ಗು ಅರಳಿಸಿ ಹೋದೆ
ಪ್ರೇಮ ಜಂಗಮನೇ
ಯಾರೀಲ್ಲ ನಿನಗೆ ಸಾಟಿ.

ಬಂಧು ಬಾಂಧವರೆಲ್ಲಾ
ನೀನಾಕಿದ ಹೂವಿನ ಗಿಡಕ್ಕಾಗಿ
ಕೈ ಚಾಚಿ ಹೂವಾದರು
ಕಬ್ಬಿಣದ ಮನಸುಗಳು
ಮಲ್ಲಿಗೆ ನಗುವ ಚಲ್ಲಿದರು

ಬದುಕಿದ್ದ ಕಾಲದಲಿ
ಒಲವಿನ ಜೋಗಳವ ಬಲ್ಲವನಿಗೆ
ಆಕಾರವಿಲ್ಲದ ಪ್ರೀತಿಯ ಆಸರೆ
ನಗುವ ಮುಡಿಸುವ ಚತುರ ನಗು
ನಿನಗಲ್ಲದೇ ಯಾರಿಗಿದೆ ಒಲವಿನ ಕವಿಯೇ

ಕಣ್ಣ ಸನ್ನೆಯ ಪ್ರೀತಿಯ ಗೆಣೆಕಾರ ನಿನಾಗಿ
ಮಧುರ ಭಾವಗಳಿಂದ ಪದಗಳ ಪೋಣಿಸಿ
ಹೆಂಡತಿಯ ಕಟ್ಟಾಕುವ ಪ್ರೇಮದ ಗಂಡುವೇ
ನೀನಂದರೆ ಇಷ್ಟವಿಲ್ಲ ಅನ್ನುವ ಗಂಡು ಹೆಣ್ಣಿಲ್ಲ

ಅಂದು ನೀನು
ಸುರಿಸಿದ ಮಲ್ಲಿಗೆ ಮಳೆಗೆ
ನೆಂದು ತೊಪ್ಪೆಯಾಗಿವೆ ಹೃದಯಗಳು
ಮಲ್ಲಿಗೆಯ ಕವಿಯೆಂದರೆ ಹೇಳುವರು ಎಲ್ಲರೂ
ಅದುವೇ ಕೆ.ಎಸ್.ನ

 

ಮಲ್ಲಿಗೆ ಚಿತ್ರಗಳು: ನಂದಿನಿ ಶಿಂದೆ 

‍ಲೇಖಕರು Admin

26 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading