ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ- ಮಾತು…

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಮಾತು ಚಾಲ್ತಿಯಲ್ಲಿರುತ್ತವೆ
ಬಹುಪರಾಕಿನ ಸಂತೆಯಲಿ
ಶಬ್ದ ಕೋಶ ನಾಚುವಷ್ಟು

ಕತ್ತರಿ ಮಾತು
ಸನ್ನೆ ಮಾತು
ಅಲ್ಲೇ ತುಸು ದೂರದ ಗುಂಪಿನಲ್ಲಿ

ನೆಲವ ತಾಗದ ಮಾತು
ಎದೆಯ ಹೊಕ್ಕದ ಮಾತು
ಚಾಲಾಕಿತನದ ವೀರಾವೇಶ
ವಿನೋದಾವಳಿಗಳ
ಗುಂಗು ಹಿಡಿಸಿ
ಭಂಗಿ ಕುಡಿಸಿದ ಮಾತು

ಅಂತೂ
ಮಾತಿನ ಮೆರವಣಿಗೆಯಲ್ಲಿ
ದುಬಾರಿ ಹಾರ ತುರಾಯಿಗಳ
ಭರ್ಜರಿ ಸಮರ್ಪಣೆಗೆ
ಮುಂದಿನ ಸ್ಥಾನಗಳ ನಿಗದಿಯ
ಸಂಚು

ಸಿಂಹ ಹುಲಿಗಳ ಮಾತಿಗೆ
ತಲೆಯಾಡಿಸಿದ ಹುಲ್ಲೆಗಳು
ಹುಲ್ಲು ಮರೆತು ನಿದ್ರಿಸಿದವು
ಐದು ವರ್ಷದ ಬೇಟೆ
ನೋಡ ನೋಡುತ್ತಿದ್ದಂತೆ
ಜನ ಜಾತ್ರೆಯ ಸದ್ದಿನ ಮರೆಗೆ
ನಡೆದೇ ಹೋಯ್ತು
         

‍ಲೇಖಕರು Admin

12 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading