ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಯ style of ಸಾಲ asking..!!

ಪ್ರತಿಭಾ ನಂದಕುಮಾರ್ 

pratibha nandakumar2ಒಂದ್ ಸಲ ಸ್ಕೂಟರಲ್ಲಿ ಹೋಗ್ತಿದ್ದೆ. ನನ್ ಫ಼್ರೆಂಡ್ (ಚಾರ್ಟರ್ಡ್ ಅಕೌಂಟೆಂಟ್) ಸಿಕ್ಕಿದ್ರು.
” ಯಾಕೆ ಹೀಗೆ ಡಲ್ ಆಗಿದ್ದೀರಿ?”
” ಬ್ಯಾಂಕಿಗೆ ಸಾಲ ಕೆಳಕ್ಕೆ ಹೋಗ್ತಿದ್ದೀನಿ. ಅದಕ್ಕೇ ಕಷ್ಟದಲ್ಲಿರೋ ಬಡವರ ಥರ ಕಾಣಿಸಕ್ಕೆ…”
” ಯಾರ ಹೇಳಿದ್ದು? ನೀವು ಕಷ್ಟ ಇದೆ ಅಂದ್ರೆ ಬ್ಯಾಂಕ್ ದುಡ್ಡು ಕೊಡಲ್ಲ. ಶ್ರೀಮಂತರ ಥರ ಹೋಗಿ ನೀನ್ ಕೊಡೋ ದುಡ್ಡು ನಂ ಕಾಲಿಗೆ ಸಮ ಅನ್ನೋ ಧೋರಣೆಲಿ ಮಾತಾಡಿ ಕೊಡ್ತಾರೆ.”
ನಾನು ವಾಪಸ್ ಮನೆಗೆ ಹೋಗಿ ರೇಷ್ಮೆ ಸೀರೆ ಉಟ್ಟುಕೊಂಡು, ಚಿನ್ನದ ಸರ ಬಳೆ ಲಿಪ್ ಸ್ಟಿಕ್ ಸೆಂಟು ಇತ್ಯಾದಿ ಹಾಕೊಂಡು ಹೋದೆ.
” ಬನ್ನಿ ಮೇಡಂ ಕೂತ್ಕೊಳ್ಳಿ ” ಅಂತ ಅರ್ಧ ಗಂಟೆಲಿ ದುಡ್ಡು ಕೊಟ್ಟರು!

 

‍ಲೇಖಕರು admin

18 March, 2016

4 Comments

  1. manjunath

    very nice.. and its true one..

  2. ಹಜರತ್ ಅಲಿ ದೇಗಿನಾಳ

    ಮೇಡಂ ನೀವು ಹೇಳಿದ್ದು ನೂರಕ್ಕೆ ನೂರು ಸರಿ.ಪಕ್ಕಾ ಕೂಲಿಯಂತೆ ಕಾಣುವ ನಾನು ಒಂದು ರಾಷ್ಟ್ರೀಕ್ಋತ ಬ್ಯಾಂಕಿನಲ್ಲಿ ಕೇವಲ ರೂಪಾಯಿ ಐವತ್ತು ಸಾವಿರ ಬೆಳೆ ಸಾಲ ಪಡೆಯಬೇಕಾದರೆ ಹೈರಾಣಾಗಿ ಹೋಗಿದ್ದೆ.ಮೋತಿ ನೋಡಿ ಮೊಳ ಹಾಕುತ್ತಾರೆ.

  3. ಸ್ಪೂರ್ತಿ ಗಿರೀಶ್

    ಹೊರಗಿನ ಮೇಕಪ್ ಗೆ ಇರುವ ಬೆಲೆ ಒಳಗಿನ ಮನುಷ್ಯತ್ವಕ್ಕೆ ಇಲ್ಲವೇ ಇಲ್ಲ . ಚೆನ್ನಾಗಿದೆ ಮ್ಯಾಡಮ್.

  4. ರಾಜೇಂದ್ರ ನಾಡಗೌಡ

    ಬ್ಯಾಂಕ ಅಷ್ಡೇ ಏಕೆ ? ಬಡ್ಡಿ ಕೊಡುವವರು, ಲೇವಾದೇವಿ ಗಾರರೂ ಕೂಡ , ನಮ್ಮನ್ನು ಗಮನಿಸಿ ಸಾಲ ಕೊಡುತ್ತಾರೆ. ಆದರೆ ಪಂಗನಾಮ ಹಾಕುವವರು ಶ್ರೀಮಂತರು, ರಾಜಕಾರಣಿಗಳು,ಮಾತ್ರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading