'ಮರೆಯಬಾರದ ಬಹುಮುಖೀ ನೆಲೆ' – ಜಿ ಪಿ ಬಸವರಾಜು

ಜಿ ಪಿ ಬಸವರಾಜು

ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಧರ್ಮವನ್ನು ಗುರಿಯಾಗಿಸಿಕೊಂಡು ನಡೆಯುವ ಹಿಂಸೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಧರ್ಮ ಅಥವಾ ನಂಬಿಕೆ ಎನ್ನುವುದು ವ್ಯಕ್ತಿಯ ಹಕ್ಕು. ಇದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎನ್ನುವ ಮಾತನ್ನು ಮೋದಿ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿಯವರ ಈ ಮಾತುಗಳು ಏಕಾಏಕಿ ಹೊಮ್ಮಿದ ಮಾತುಗಳಲ್ಲ. ಭಾರತದ ರಾಜಧಾನಿಯಲ್ಲಿ ಚಚರ್ುಗಳ ಮೇಲೆ, ಮೇಲಿಂದ ಮೇಲೆ ನಡೆದ ದಾಳಿ, ಹಿಂಸಾಕೃತ್ಯಗಳು ದೇಶದ ಒಳಗಿನಿಂದ ಮತ್ತು ಹೊರಗಿನಿಂದ ತೀವ್ರ ಟೀಕೆಗೆ ಒಳಗಾದವು. ಧಾಮರ್ಿಕ ಸಹಿಷ್ಣುತೆ ಈ ರಾಷ್ಟ್ರವನ್ನು ಒಂದಾಗಿ ಬೆಸೆದಿರುವ ತತ್ವ ಎನ್ನುವ ಉಪದೇಶ ಹೊರಗಿನಿಂದ ಬಂದನಂತರವೇ ಮೋದಿ ಈ ಸ್ಪಷ್ಟನೆಯನ್ನು ನೀಡಿದ್ದು.
ಕೇಂದ್ರದಲ್ಲಿ ಬಿಜೆಪಿ ಬಹು ಸಂಖ್ಯಾಬಲದಿಂದ ಅಧಿಕಾರಕ್ಕೆ ಬಂದು ಇನ್ನೂ ಒಂದು ವರ್ಷ ಪೂರ್ಣಗೊಂಡಿಲ್ಲ. ಮೋದಿಯ ಅಲೆಯಲ್ಲಿ ವಿರೋಧ ಪಕ್ಷಗಳು ಕೊಚ್ಚಿಹೋದವು. ನಂತರ ನಡೆದ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ ಬಿಜೆಪಿ ಮತ್ತು ಮಿತ್ರಪಕ್ಷಗಳು ಗೆಲುವಿನ ಮೇಲೆ ಗೆಲುವಿನ ಕೋಟೆಯನ್ನೇ ಕಟ್ಟುತ್ತಾ ಹೋದವು. ದೆಹಲಿಯ ಚುನಾವಣೆಯಲ್ಲಿ ಮೊನ್ನೆಬಿದ್ದ ಪ್ರಾಣಾಂತಿಕ ಪೆಟ್ಟನ್ನು ಹೊರತುಪಡಿಸಿದರೆ, ಬಿಜೆಪಿಯ ಬಲೂನಿಗೆ ಸೂಜಿಮೊನೆ ತಾಕಿದ್ದೇ ಇಲ್ಲ. ಅದು ಗಾಳಿಯಲ್ಲಿ ಸ್ವಚ್ಛಂದವಾಗಿ ಹಾರುತ್ತಲೇ ಇತ್ತು. ಗಾಳಿಯಲ್ಲಿನ ಹಾರಾಟ ಯಾವಾಗಲೂ ನೆಲದ ನಂಟನ್ನು ಮರೆಸಿಬಿಡುತ್ತದೆ.

ಬಿಜೆಪಿ ಮತ್ತು ಮಿತ್ರಪಕ್ಷಗಳು ನಿಜಕ್ಕೂ ನೆಲವನ್ನು ಮರೆತವೇ ಅಥವಾ ತಮ್ಮ ನೆಲಗಟ್ಟಿನ ನಿಜವಾದ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತರುವ ಹುನ್ನಾರದಲ್ಲಿ ತೊಡಗಿವೆಯೇ? ಅಂತೂ ಈ ನಾಡಿನಲ್ಲಿ ಪ್ರಜಾಪ್ರಭುತ್ವ ತತ್ವಕ್ಕೆ ಸಲ್ಲದ, ನಾವು ಒಪ್ಪಿಕೊಂಡಿರುವ ನಮ್ಮ ಸಂವಿಧಾನಕ್ಕೆ ಹೊರತಾದ ಅನೇಕ ಕೃತ್ಯಗಳು ನಡೆಯುತ್ತಿವೆ. ಬಿಜೆಪಿಯ, ಬಲಪಂಥೀಯ ಪಕ್ಷಗಳ, ಮಿತ್ರಪಕ್ಷಗಳ, ಸಂಘಪರಿವಾರದ ನಾಯಕರ ಉತ್ಸಾಹ ಎಷ್ಟು ಜೋರಾಗಿದೆಯೆಂದರೆ, ಇದನ್ನು ತಡೆಯುವುದೇ ಪ್ರಧಾನಿ ಮೋದಿಗೆ ದೊಡ್ಡ ತಲೆನೋವಾಗಿ ಕಂಡಿದೆ. ಅವರು ಎಳೆದ ಲಕ್ಷ್ಮಣರೇಖೆಯನ್ನು ಮೀರುವುದೇ ತಮ್ಮ ನಿತ್ಯ ಕಾಯಕ ಎನ್ನುವಂತೆ ಅನೇಕ ಮುಂದಾಳುಗಳು ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಈ ಹೇಳಿಕೆಗಳು ಕೇವಲ ಹೇಳಿಕೆಗಳಲ್ಲ. ಇವುಗಳಲ್ಲಿ ಮತಧರ್ಮಗಳ ಮೂಲಕ ಜನ ಸಮುದಾಯಗಳನ್ನು ಉದ್ರೇಕಿಸುವ, ಅವರೊಳಗೆ ದ್ವೇಷದ ಕಿಡಿಗಳನ್ನು ಹೊತ್ತಿ ಉರಿಸುವ ಹುನ್ನಾರವಿದೆ. ಇದು ಒಂದು ರಾಷ್ಟ್ರದ ನೆಮ್ಮದಿಯನ್ನು ಕಲಕುವಂಥದ್ದು.
ಕೇಂದ್ರದಲ್ಲಿ ಯಾವುದೇ ಪಕ್ಷ ಅಥವಾ ಪಕ್ಷಗಳು ಅಧಿಕಾರ ನಡೆಸಬಹುದು. ಪ್ರಜಾಪ್ರಭುತ್ವದಲ್ಲಿ ಜನ ತಮಗೆ ಬೇಕಾದ ಪಕ್ಷವನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಪಕ್ಷಗಳು ಬೇಕಾಬಿಟ್ಟಿಯಾಗಿ ಅಧಿಕಾರವನ್ನು ಚಲಾಯಿಸಲು ಸಾಧ್ಯವಿಲ್ಲ. ಯಾವುದೇ ಸರ್ಕಾರವನ್ನು ನಿಯಂತ್ರಿಸಲು ನಮ್ಮ ಸಂವಿಧಾನವಿದೆ. ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದ ಸಮಿತಿ ರಚಿಸಿರುವುದರ ಹಿಂದೆ ಸ್ಪಷ್ಟ ಉದ್ದೇಶವಿದೆ: ಬಹುಮುಖೀ ಸಂಸ್ಕೃತಿ, ಜನಸಮುದಾಯಗಳಿರುವ ಈ ನಾಡಿನಲ್ಲಿ ಸಹಬಾಳ್ವೆ ಬಹಳ ಮುಖ್ಯ ತತ್ವ. ಎಲ್ಲ ಜನಗಳೂ ತಮ್ಮ ವೈಯಕ್ತಿಕ ನಂಬಿಕೆಗಳನ್ನು ಮೀರಿ ಸಹಬಾಳ್ವೆ ನಡೆಸಲು, ನೆಮ್ಮದಿಯಿಂದ ಇರಲು ನಮ್ಮ ಸಂವಿಧಾನ ಸೂಚಿಸುತ್ತದೆ. ತನ್ನ ಕಾರ್ಯಸೂಚಿ ಏನೇ ಇದ್ದರೂ ಅಧಿಕಾರದಲ್ಲಿರುವ ಪಕ್ಷ, ಸಂವಿಧಾನದ ಈ ಮಹತ್ವದ ತತ್ವವನ್ನು ಪರಿಪಾಲಿಸಬೇಕು. ಇಲ್ಲವಾದರೆ ರಾಷ್ಟ್ರ ನೆಮ್ಮದಿಯಿಂದ ಮುನ್ನಡೆಯಲಾರದು. ಇದನ್ನು ಬಿಜೆಪಿ ನೇತೃತ್ವದ ಸಕರ್ಾರ ಕಡೆಗಣಿಸಿದಂತೆ ತೋರುತ್ತಿದೆ. ರಾಷ್ಟ್ರವನ್ನು ಚಿಂದಿ ಮಾಡಿ ಯಾವುದೇ ಪಕ್ಷ ಅಸ್ತಿತ್ವದಲ್ಲಿ ಮತ್ತು ಅಧಿಕಾರದಲ್ಲಿ ಇರಲಾರದು ಎಂಬ ಸತ್ಯ ಮೋದಿ ಸರ್ಕಾರಕ್ಕೆ ತಿಳಿಯಬೇಕಾಗಿದೆ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೇಂದ್ರ ಸಕರ್ಾರ ಪ್ರಕಟಿಸಿದ ಜಾಹೀರಾತಿನಲ್ಲಿ, ನಮ್ಮ ಸಂವಿಧಾನದ ‘ಸಮಾಜವಾದಿ’ ಮತ್ತು ‘ಜಾತಿ ಮತಧರ್ಮ ನಿರಪೇಕ್ಷ’-ಎನ್ನುವ ಪದಗಳು ಇಲ್ಲವಾಗುವಂತೆ ನೋಡಿಕೊಳ್ಳಲಾಯಿತು. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಈ ಪದಗಳು, ನಮ್ಮ ಬಹುಮುಖಿ ನೆಲೆಗಳನ್ನು ಸೂಚಿಸುತ್ತವೆ. ವಿಭಿನ್ನ ನಂಬಿಕೆ, ಸಂಸ್ಕೃತಿಗಳ ಸಮುದಾಯಗಳು ನೆಮ್ಮದಿಯಿಂದ ಸಹಬಾಳ್ವೆ ನಡೆಸಲು ಅಗತ್ಯ ತತ್ವವನ್ನು ತಮ್ಮ ಒಡಲಲ್ಲಿ ತುಂಬಿಕೊಂಡಿರುವ ಈ ಪದಗಳು ನಮ್ಮ ರಾಷ್ಟ್ರವನ್ನು ಒಂದಾಗಿ ರೂಪಿಸಿರುವ ಸಿದ್ಧಾಂತಗಳೂ ಹೌದು. ಅದಕ್ಕಾಗಿಯೇ ಸಂವಿಧಾನದಲ್ಲಿ ಈ ಪದಗಳಿಗೆ ವಿಶೇಷ ಸ್ಥಾನ. ಜಾಹೀರಾತಿನಲ್ಲಿ ಈ ಪದಗಳು ಆಕಸ್ಮಿಕವಾಗಿ ಬಿಟ್ಟುಹೋಗಲಿಲ್ಲ. ಉದ್ದೇಶಪೂರ್ವಕವಾಗಿಯೇ ಇವನ್ನು ಕೈಬಿಟ್ಟು ರೂಪಿಸಿದ ಜಾಹಿರಾತುಗಳನ್ನೇ ಸಕರ್ಾರ ಪ್ರಕಟಿಸಿದೆ. ಹೀಗೆ ಭಾವಿಸುವುದಕ್ಕೆ, ನಂಬುವುದಕ್ಕೆ ಹಿನ್ನೆಲೆಯೂ ಇದೆ; ಸಮರ್ಥ ಕಾರಣಗಳೂ ಇವೆ: ಹಿಂದೆ ಎನ್ಡಿಎ ಸಕರ್ಾರ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದಾಗ ನಡೆದ ಅನೇಕ ಸಂಗತಿಗಳನ್ನು ಪರಿಶೀಲಿಸಿದಾಗ ಈ ಸಂಗತಿಗಳು ಹೆಚ್ಚು ನಿಚ್ಚಳವಾಗುತ್ತವೆ. ಸಂವಿಧಾನ ಮರುಪರಿಶೀಲನೆಗೆ ಸಮಿತಿ ರಚನೆ (ನಮ್ಮ ಸಂವಿಧಾನದಲ್ಲಿ ತಿದ್ದುಪಡಿಗಳಿಗೆ ಅವಕಾಶವಿದೆ ಎಂಬುದು ನಿಜ. ಹಲವಾರು ತಿದ್ದುಪಡಿಗಳನ್ನು ಮಾಡುತ್ತಲೇ ನಮ್ಮ ಪ್ರಜಾಪ್ರಭುತ್ವ ಮುನ್ನಡೆದಿದೆ. ಆದರೆ ಸಂವಿಧಾನದ ಮರುಪರಿಶೀಲನೆ ಅಥವಾ ಮರುರಚನೆಗೆ ಅವಕಾಶವಿಲ್ಲ. ಆ ದಿನಗಳಲ್ಲಿ ಎನ್ಡಿಎ ಸಕರ್ಾರಕ್ಕೆ ಮೂರನೇ ಎರಡರಷ್ಟು ಬಹುಮತವೂ ಇರಲಿಲ್ಲ ಎಂಬುದೂ ಮುಖ್ಯ ಅಂಶ. ಆದರೂ ಮರುಪರಿಶೀಲನೆಗೆ ಸಮಿತಿ ರಚಿಸಿದ್ದರ ಹಿಂದೆ ಯಾವ ಉದ್ದೇಶವಿತ್ತು?), ಪ್ರೋಕ್ರಾನ್ನಲ್ಲಿ ಅಣುಬಾಂಬ್ ಸ್ಫೋಟ (ಇದಕ್ಕೆ ಆಯ್ಕೆ ಮಾಡಿಕೊಂಡ ದಿನಕ್ಕೆ ಕೂಡಾ ಮಹತ್ವವಿದೆ. ಅದು ವೈಶಾಖ ಪೂಣರ್ಿಮೆಯ ದಿನ. ಬುದ್ಧ ಹುಟ್ಟಿದ್ದು, ಪರಿನಿವರ್ಾಣ ಹೊಂದಿದ್ದು, ಅವನಿಗೆ ಜ್ಞಾನೋದಯವಾದದ್ದು ಎಲ್ಲವೂ ಈ ವೈಶಾಖ ಪೂಣರ್ಿಮೆಯ ದಿನದಂದೇ. ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತೊರೆದು ಬೌದ್ಧಧರ್ಮವನ್ನು ಸ್ವೀಕರಿಸಿರೆಂಬ ಹಿನ್ನೆಲೆಯೂ ಇದೆ) ಇತ್ಯಾದಿ.
ಬಾಬ್ರಿ ಮಸೀದಿ ಧ್ವಂಸ, ಗುಜರಾತ್ನಲ್ಲಿ ನಡೆದ ನರಮೇಧ ಇವುಗಳನ್ನೆಲ್ಲ ತನ್ನ ಬೆನ್ನಿಗೇ ಕಟ್ಟಿಕೊಂಡು ಅಧಿಕಾರ ನಡೆಸುತ್ತಿರುವ ಬಿಜೆಪಿ ಮತ್ತು ಮಿತ್ರಪಕ್ಷಗಳ ಸಕರ್ಾರ ಈ ರಾಷ್ಟ್ರವನ್ನು ಅದರ ಬಹುಮುಖೀ ನೆಲೆಯನ್ನು ಗೌರವಿಸಿ ಮುನ್ನಡೆಸಲು ಮಾನಸಿಕವಾಗಿ ಸಿದ್ಧವಾಗಿದೆಯೇ? ಹಾಗಿದ್ದರೆ ಮತೀಯ ಭಾವನೆಗಳನ್ನು ಕೆರಳಿಸುವ ಕೃತ್ಯಗಳು ಏಕೆ ನಡೆಯುತ್ತವೆ? ‘ಘರ್ ವಾಪಸಿ’ ಕಾರ್ಯಕ್ರಮದ ಅರ್ಥವೇನು? ಮತಾಂತರವನ್ನು ನಿಷೇಧಿಸಿ ಎಂದು ಒತ್ತಾಯಿಸುತ್ತ, ‘ಘರ್ ವಾಪಸಿ’ಯನ್ನು ಒಂದು ಬಲವಂತದ ಕಾರ್ಯಕ್ರಮವಾಗಿ ನಡೆಸುತ್ತಿರುವುದರ ಮತ್ತು ಆ ಮೂಲಕ ಹಿಂಸಾಕೃತ್ಯಗಳಿಗೆ ಪ್ರಚೋದನೆ ನೀಡುತ್ತಿರುವುದರ ಉದ್ದೇಶವೇನು? ಇತರ ಧರ್ಮೀಯರೂ ಬಲವಂತದ ಮತಾಂತರಕ್ಕೆ ಮುಂದಾದರೆ ಅದೂ ತಪ್ಪು. ಅದನ್ನು ತಡೆಯಲು ನಮ್ಮಲ್ಲಿ ಕಾನೂನುಗಳಿವೆ. ಹಿಂದೂ ಸಂಘಟನೆಗಳು ಕೇರಳ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ನಡೆಸಿರುವ ‘ಘರ್ ವಾಪಸಿ’ಯ ಹಿಂದೆ ದುರುದ್ದೇಶವಿರುವುದು ಸ್ಪಷ್ಟ.
ಈ ಹಿನ್ನೆಲೆಯಲ್ಲಿಯೇ ಮದರ್ ತೆರೆಸಾ ಅವರನ್ನು ಎಳೆದು ತರಲಾಗಿದೆ. ಅವರ ಸೇವೆಯನ್ನು ಟೀಕಿಸಲಾಗಿದೆ. ‘ಅದೊಂದು ಮತಾಂತರ ಉದ್ದೇಶದ ಸೇವೆ’ ಎಂದು ಆರ್ಎಸ್ಎಸ್ ಮತ್ತು ಬಿಜೆಪಿಯ ಕೆಲ ಮುಖಂಡರು ಟೀಕಿಸಿದ್ದಾರೆ. ಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಮತ್ತೆ ‘ನಿಜವಾದ ರಾಷ್ಟ್ರಭಕ್ತ’ನನ್ನಾಗಿ ಮಾಡುವ, ‘ಸ್ವಾತಂತ್ರ್ಯ ಹೋರಾಟಗಾರನನ್ನಾಗಿ’ ರೂಪಿಸುವ, ಅವನಿಗಾಗಿಯೇ ಒಂದು ದೇವಾಲಯವನ್ನೇ ನಿಮರ್ಿಸಲು ಹೊರಡುವ ಉತ್ಸಾಹದ ಹಿಂದಿರುವ ಶಕ್ತಿಗಳು ಯಾವುವು? ‘ಗಾಂಧಿಯನ್ನು ಕೊಲ್ಲುವ ಬದಲು ಗೋಡ್ಸೆ ನೆಹರೂ ಅವರನ್ನು ಕೊಲ್ಲಬೇಕಿತ್ತು’ ಎಂದು ಬಿಜೆಪಿಯ ಮುಖಂಡರೊಬ್ಬರು ಹೇಳುತ್ತಿರುವುದು ಯಾಕಾಗಿ? ‘ಭಾರತದಲ್ಲಿರುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಹಿಂದೂಗಳು’ ಎಂದು ಹೇಳುವ ಪ್ರವೀಣ್ ತೊಗಡಿಯಾ ಅವರ ಮಾತಿನ ಮರ್ಮವೇನು?-ಇಂಥ ಪ್ರಶ್ನೆಗಳನ್ನು ಗಂಭೀರವಾಗಿ ಪರಿಶೀಲಿಸಬೇಕಾಗಿದೆ.
ದ್ವೇಷದ ಮಾತುಗಳ ಮೂಲಕ ಬೆಂಕಿ ಹೊತ್ತಿಸುವುದು ಸುಲಭ. ನಂತರ ಈ ಬೆಂಕಿಯನ್ನು ಆರಿಸುವುದು ಕಷ್ಟ. ಈ ಬೆಂಕಿ ಯಾರನ್ನು ನುಂಗುವುದೋ ಹೇಳಲು ಬರುವುದಿಲ್ಲ. ಉರಿವ ಬೆಂಕಿಗೆ ಎಸೆದು ಒಂದು ರಾಷ್ಟ್ರವನ್ನು ನಾಶಮಾಡಬಾರದು.
 

‍ಲೇಖಕರು G

March 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Palahalli Vishwanath

    ಚೆನ್ನಾಗಿದೆ. ಇ೦ದೂ ಮ೦ತ್ರಿಯೊಬ್ಬರು ನಾವು ರಾಮನ ದೇವಸ್ಥಾನವನ್ನು ಕಟ್ಟಿಯೇ ಕಟ್ಟುತ್ತೇವೆ ಎ೦ದು ಹೇಳಿದ್ದಾರೆ.

    ಪ್ರತಿಕ್ರಿಯೆ
  2. savitri.V.Hatti

    ಉರಿವ ಬೆಂಕಿಗೆ ಎಸೆದು ಒಂದು ರಾಷ್ಟ್ರವನ್ನು ನಾಶಮಾಡಬಾರದು….
    ನಿಜ ಸರ್….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: