ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರಳಲಾಗದ ಸ್ವಪ್ನ..

ಕಮಲಾಕರ ಕಡವೆ

ತಳವಿರದ ಕೊಳವೊಂದು ತೆರೆದಂತೆ ತಿಂಗಳಡಿಗೆ
ಗಾಳಿದಾರಿಗಳಲ್ಲಿ ಹುಡುಕುತ್ತೇನೆ ಸುಳಿವುಗಳ
ಕನಸೊಳಗೆ ಇಳಿದು ಗೋಗೋಜಲಾದ ನೆನಪುಗಳ
ಮನಸೊಳಗೆ ಸುಳಿದಾಡಿ ಮಾತಿಗೆ ಬಾಗದ ರೂಪಗಳ

ಅಂಗಳದ ಪಾರಿಜಾತದ ಬುಡಕೆ ಸುತ್ತೂ ರಂಗೋಲಿ
ಬಿಳಿ, ಕೇಸರಿ, ಹಸಿರು… ಇನ್ನೂ ಹಸಿರು ಉಸಿರು
ಹೂಬಜಾರಿನಲ್ಲಿ ಟನ್ನು ಕೆಜಿಗಳಲ್ಲಿ ದಣಿದ ಬುಟ್ಟಿಗಳಲ್ಲಿ
ಯಾಕೆ ಕಾಣುವುದಿಲ್ಲವೋ ಕಾಣೆ ಇನಿತೂ ಹೊಸತು

ಇಂಚರಗಳಿರದ ಸಂಜೆ ಎಲೆಚಪ್ಪರವಿರದ ಡಾಳುಬಾನು
ಬಿದಿರು ಬಾಂಸುರಿ ದಾಟಿ ಶೃತಿ ಮೀಟಿ ಸುತ್ತಲೂ
ಊರ ಹೆಸರಿಗೇ ಅಂಟಿಬಿಡುವ ತಂಗಾಳಿ
ಬೀಸುವುದಿಲ್ಲ ನನ್ನ ಆರ್ತನಾದಗಳ ಹೊರಗೆ

ವಲಸೆ ಎಂದರೆ ಇದ್ದು ಇಲ್ಲದರ ಹೊಯ್ದಾಟ
ನಾಳೆಗೆ ಬೇಡದ ನಿನ್ನೆ ಇಂದು ನಡೆಸುವ ಸೆಣಸಾಟ
ಮರಳಲಾಗದ ಸ್ವಪ್ನವೊಂದರ ಸೆಳೆತ
ಪಾತಾಳದಾಳಬೀಳುವ ಬಿಸಿಲಕೋಲು

‍ಲೇಖಕರು Avadhi

13 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading