ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಮತಾ ಅರಸೀಕೆರೆ ಹೊಸ ಕವಿತೆ- ಜೀವನ್ಮೋಹಿ ನಾನು…

ಮಮತಾ ಅರಸೀಕೆರೆ

ಮಾತಿಲ್ಲದೆ ಎದೆ ಬಡಿತ ಹೆಚ್ಚಿಸಿದೆ ನೀನು
ಮಾತಿನಲ್ಲೇ ಪ್ರೇಮ ಮುನ್ನುಡಿ ಬರೆದೆ ನಾನು
ಸಾಮಿಪ್ಯವಿಲ್ಲದೆ ಪುಳಕ ಬಯಸೊ ದುಂಬಿ ನೀನು
ಮೆಲ್ಲನೆ ಹತ್ತಿರಕ್ಕೆ ಕರೆವ ಸೊಗಸಾದ ಹೂ ನಾನು
ಪದವಿಲ್ಲದೆ ಝುಮ್ಮೆನಿಸೊ ಕಣ್ಣ ಸಾಲು ಬರೆದ ನೀನು
ಅಕ್ಷರದ ಆರ್ದ್ರತೆಗೆ ಜೀವ ತುಂಬಿದ ಪದಪುಂಜ ನಾನು

ನೋಡದೆಯೂ ಹಾಡಿದ ಮೌನ ರಾಗಲೀಲೆ ನೀನು
ಕಾಣಲೆಂದೆ ನಿನ್ನ ಸಾಗರ ದಾಟಿದ ಆಲಾಪನೆ ನಾನು
ಬಚ್ಚಿಟ್ಟುಕೊಂಡೆ ಮಿಡಿಯುವ ಹೃದಯ ಬಡಿತ ನೀನು
ಉಸಿರನ್ನೆ ರಭಸವಾಗಿಸಿ ಪ್ರೇಮವೇಗವಾಗಿಸಿದೆ ನಾನು
ಜೊತೆಯಿಲ್ಲದೆಯೂ ಏರಿಸಿದ ಸಂಭಾವ್ಯ ನಶೆ ನೀನು
ಸಾಂಗತ್ಯದ ಅಮಲಿಗೆ ಅಂಟಿಕೊಂಡ ಮಧುಶಾಲೆ ನಾನು
ಆಗುವ ಆಗಬಯಸುವ ಅಪರೋಕ್ಷ ಸಾಧ್ಯತೆಯೆ ನೀನು
ಆಪ್ತತೆಯ ಆಲಿಂಗನಕ್ಕೆ ಅಂಟುವ ಜೀವನ್ಮೋಹಿ ನಾನು

‍ಲೇಖಕರು Admin

18 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading