ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೆಯಂಗಳದ ರಂಗೋಲಿಯ ಹಾಗೆ..

ಅಮಿತಾ ರವಿಕಿರಣ್ / ಬೆಲ್ಫಾಸ್ಟ್

ಕನಸುಗಳು
ಬೀಳುತ್ತವೆ ನಿದ್ದೆಯಲ್ಲಿದ್ದಾಗ

ಎದ್ದು ಕುಳಿತಾಗ
ಕದ್ದು ಓಡುತ್ತವೆ
ಗಾಳಿಗೆ ಎಲ್ಲೆಂದರಲ್ಲಿ
ಹರಿದಾಡುವ ಬೂರುಗದ ಅರಳೆಯಂತೆ.

ಕನಸುಗಳು ಹಗುರ,
ನವಿರು
ಮುಟ್ಟ ಹೋದರೆ ಕಮರುತ್ತವೆ
ಹರಡಿ ಹದಗೆಡುತ್ತವೆ ಮನೆಯಂಗಳದ ರಂಗೋಲಿಯ ಹಾಗೆ,

ಕನಸುಗಳು..
ಒಳ್ಳೆಯವು ,ಕೆಟ್ಟವು , ಅನಿಷ್ಟ
ಒಂದಷ್ಟು ದುಷ್ಟ

ಕನಸು
ಕೆಲವು ನನ್ನವು ಕೆಲವು ಅವನವು
ಕೆಲವು “ನಮ್ಮವು” ಎನ್ನುವ ಭ್ರಮೆ ಹುಟ್ಟಿಸುವ ಮಾಯಾಮೃಗ, ಆಗ ಇತ್ತು ಈಗ ಇಲ್ಲ.

ಕನಸುಗಳು
ಇವನ ತಕ್ಕೆಯಲ್ಲಿ ಮಲಗಿ ಗಾಢ ನಿದ್ರೆಯಲ್ಲಿರುವಾಗ, ಅವನ ರಂಗು ರಂಗಿನ ಚಿತ್ರ ತೊರಿಸುವ ವ್ಯಭಿಚಾರಿ

ಕನಸುಗಳು
ಬರುವುದಾದರೂ ಏಕೆ?
ಏಕತಾರಿಯ ಒಂಟಿ ನಾದದಂತೆ

ಕನಸುಗಳು
ಕಣ್ಜೀರಿಗೆ ಹುಳದಂತೆ,
ನಿಸ್ಸಾರ ಬದುಕಿಗೆ ಜೀರಂಗಿ ಮೆರಗು ಕೊಡುವ ಜೀವನ್ಮುಖಿ ಕಿರಣದಂತೆ.

ಕನಸು ಆತ್ಮಸಖಿ
ಮನಸ್ಸಿಗೂ ತಿಳಿಯದಂತೆ ಸುಷುಪ್ತಿಯ ಪರದೆಯಲ್ಲಿ ನಟಿಸುವ ಅದ್ಭುತ ಕಲೆಗಾರ್ತಿ

ಕನಸುಗಳು
ನನಗಿಷ್ಟ
ಅಲ್ಲಿ ನೀನು ಕೆಲ ಸಮಯಕ್ಕಾದರೂ ಪೂರ್ತಿ ನನ್ನವನು

‍ಲೇಖಕರು avadhi

10 February, 2019

1 Comment

  1. ರೇಣುಕಾ ರಮಾನಂದ

    ಬಹಳ ಇಷ್ಟ ಆಯ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading