ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೆಗೆ ಬಂದರು 'ಅಂಬೈ'

ಜಯಶ್ರೀ ಕಾಸರವಳ್ಳಿ 

ಉಷಾ .ಪಿ. ರೈ ಅವರ ಪುಸ್ತಕ ಬಿಡುಗಡೆ,  ಕಾಮತ್ ಹೋಟೆಲ್ಲಿನ ರೊಟ್ಟಿ ಊಟ ಮುಗಿಸಿ, ಮನೆಗೆ ಬರುವಾಗ 4.30 ಗಂಟೆ. ಮನೆಗೆ ಬರುವ ವೇಳೆಗೆ ಇಬ್ಬರು ಮಹತ್ವದ ವ್ಯಕ್ತಿಗಳು ನಮಗಾಗಿ ಕಾಯುತ್ತಿದ್ದರು.
jayashree kasaravalliತಮಿಳಿನ ಖ್ಯಾತ ಬರಹಗಾರ್ತಿ, ಮಹಿಳಾ ಹೋರಾಟಗಾರ್ತಿ, ಮುಂಬೈಯಲ್ಲಿ Sparrow ಎಂಬ NGO ನಡೆಸುತ್ತಿರುವ ‘ಅಂಬೈ’ ಕಾವ್ಯನಾಮದಿಂದ ಈಗಾಗಲೇ ಹೆಸರು ಮಾಡಿರುವ, Dr.C.S. Lakshmi ಮತ್ತು ಇಂಗ್ಲೀಷ್ ನಲ್ಲಿ ಎರಡು ಕಾದಂಬರಿ ಬರೆದಿರುವ ಪಂಜಾಬಿ ಲೇಖಕ ಅಮನ್ ಸಿಂಗ್.
ಲಕ್ಷ್ಮಿಯವರು ಜೆ.ಎನ್.ಯು ಪ್ರಾಡಕ್ಟ್. ಸಿರುಗುಗಲ್ ಮುರಿಯುಮ್ ( Wings will be broken) ಎಂಬ ಅವರ ಕತೆ ತಮಿಳು ಸಾಹಿತ್ಯ ವಲಯದಲ್ಲಿ ದೊಡ್ಡ ಸಂಚಲನವನ್ನೇ ಹುಟ್ಟಿಸಿತ್ತು. The face behind the mask, ತಮಿಳು ಮಹಿಳಾ ಲೇಖಕಿಯರನ್ನು ಕುರಿತು ಅವರು ಪ್ರಕಟಿಸಿದ ಕೃತಿ. ತಮಿಳು ಸ್ತ್ರೀ ಸಾಹಿತ್ಯವನ್ನು, ಸ್ತ್ರೀವಾದಿ ಚಿಂತನೆಯನ್ನು, ಸ್ತ್ರೀ ಪರ ತೀಕ್ಷ್ಣ ದೃಷ್ಟಿಕೋನವನ್ನು ಒಳಗೊಂಡಿದೆ.
A purple sea, In a forest, a deer ಎಂಬ ಲಕ್ಷ್ಮಿಯವರ ಕೃತಿಗಳನ್ನು Lakshmi Holmstorm ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. University of Chicago ನ ವಿಸಿಟಿಂಗ್ ಪ್ರೊಫೇಸರ್ ಯಾಗಿ ಕಾರ್ಯ ನಿರ್ವಹಿಸಿರುವ ಲಕ್ಷ್ಮಿಯವರ ಮಹತ್ವಾಕಾಂಕ್ಷೆಯ ಸಂಸ್ಠೆ Sparrow. ಮಹಿಳಾ ಲೇಖಕಿಯರನ್ನು. ಕಲಾವಿದರನ್ನು ಬೇರೆ ಬೇರೆ ಭಾಷೆಗೆ ಪರಿಚಯಿಸುವ ಮೂಲಕ ಇವರು ಸಾಹಿತ್ಯಿಕ ಕೊಂಡಿಯಾಗಿದ್ದಾರೆ.
ತಮ್ಮನ್ನ ತಾವೇ Feminist Writer ಎಂದು ಗುರುತಿಸಿಕೊಂಡರೂ, ವಿಭಿನ್ನ ರೀತಿಯ ಸ್ತ್ರೀವಾದಿಯಾಗಿ, ಅಂಥ ಪ್ರಚಾರ ಸಿಗದ ಅನೇಕ ಮಹಿಳಾ ಲೇಖಕಿಯರನ್ನು, ಮಹಿಳಾ ಕಲಾವಿದರನ್ನು ಗುರುತಿಸಿ, ಸಮಸ್ಯೆಯಿರುವ ಹಲವು ಹೆಣ್ಣು ಮಕ್ಕಳಿಗೆ ಮುಂಚೂಣಿಗೆ ಬರಲು ಮಾನಸಿಕ ಸೈರ್ಯವನ್ನು ನೀಡುತ್ತಾ ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಿದ್ದಾರೆ.

‍ಲೇಖಕರು Avadhi

8 June, 2016

1 Comment

  1. Anonymous

    Thaanks avadhi and sandhya Rani

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading