ನಂಟು
ತುಂಬಿದ ಹಾಲಿನ ಕೊಡಕೆ
ಹುಳಿಯ ಹನಿ
ತುಂಬಿದ ಮನಕೆ
ಅವರೆಸಗಿದ ಬೇಸರದ ಕಿಡಿ!
ಬುಸ್ಸೆಂದು ಬಡಿದು ಹೋಯ್ತು
ನಾನು ನಿಂತೇ ಇದ್ದೆ
ತುಸು ನಗು ಮಾಸಿತ್ತು
ಮನಸ್ಸು ತಿಳಿಗೊಳ್ಳುತ್ತಿತ್ತು!
ದಾಟಿ ಹೋದರು ಅವರು
ದಾಟಿ ಬಂದೆನು ನಾನು
ಮಧ್ಯದಲಿ ಎರಡಕ್ಷರದ ವ್ಯತ್ಯಾಸ
ನನಗೂ ಅವರಿಗೂ ಹೆಸರಿನಲಿ!
ಇರಲಿ ಹೀಗೆ ನಂಟು, ಗಂಟುಗಳು
ಬಿಡಿಸುತ ಅಂಟುತ ನಡೆವುದು ಸೊಗಸು
ಓರೆ-ಕೋರೆಗಳಿಲ್ಲದೆ ನಡೆದು
ಜಡ್ಡು ಗಟ್ಟುವುದೂ ಬೇಡ ಕಾಲು; ಈ ದಾರಿ
ಹಾಗೂ ಹೀಗೂ ಒರಳಿ ತುಳುಕಿ
ತಿರುಗಿ ಬಾಗಿ ನಡೆದುಬಿಡೋಣ
ನಾನಿನ್ನೂ ದಾಪುಗಾಲು
ಅವರುಗಳೆದುರು…… !!







ಫೈನ್ ಫೈನ್ ದಿವ್ಯಾ
ಚೆನ್ನಾಗಿದೆ. ಚೆನ್ನಾಗಿದೆ.
lovely
nice..madam..
Good
ಚೆನ್ನಾಗಿದೆ ದಿವ್ಯಾ . ಕವಿತೆಯಿಂದ ಕವಿತೆಗೆ ನೀವು ಹೆಚ್ಚು ಇಷ್ಟವಾಗ್ತಾ ಇದ್ದೀರಿ
sogasaagide kavana
ಪ್ರತಿಕ್ರಿಯಿಸಿ ಬೆಂಬಲಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೇ 🙂