ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೊಂದು 'ಗೋವಿನ ಹಾಡು'

ಗೋವಿನ ಹಾಡು- ೨

ಶಿವಕುಮಾರ್ ಮಾವಲಿ

ಓ ಮನುಷ್ಯರೇ,
ಯಾವ ಕಾರಣಕ್ಕಾಗಿ
ನನ್ನ ಸತ್ಯ-ಸಂಧತೆ ಹಾಗೂ  ಪ್ರಾಮಾಣಿಕತೆ
ಜಗಜ್ಜಾಹೀರು ಮಾಡಲು ಅಂದು
ಆ ನಿಷ್ಪಾಪಿ ಹುಲಿಯನ್ನು ಕೊಂದಿರಿ?
ನನ್ನನ್ನು ಕಾಮಧೇನು ಅಂದಿರಿ
ಕಸಾಯಿ ಖಾನೆಗೂ ಅಟ್ಟಿದಿರಿ
ಗೋಪೂಜೆ- ಗೋದಾನಗಳೆಂದು
ನನ್ನ ಬೆಲೆಯನ್ನು ನೀವೇ ಹೆಚ್ಚಿಸಿಕೊಂಡಿರಿ.
ನನ್ನಲ್ಲಿ ಮುಕ್ಕೋಟಿ ದೇವತೆಗಳಿವೆ
ಎಂದು ಪುರಾಣ ಬರೆದುಕೊಂಡಿರಿ
‘ಗೋ- ಭಕ್ಷಣೆ ನಿಷೇಧ ಕಾನೂನು’ ಎನ್ನುತ್ತ
ವರುಷಗಟ್ಟಲೆ ಕೂತು ಚರ್ಚಿಸಿದಿರಿ.
ಬ್ರಾಹ್ಮಣ್ಯ ಮತ್ತು ಬುದ್ಧಿಜೀವಿಗಳೆಂಬ
ಇಕ್ಕೆಲಗಳಲ್ಲಿ ನನ್ನ ಅಸ್ಥಿತ್ವವನ್ನು
ಪಾವಿತ್ರ್ಯವನ್ನು ವಿಚಾರಿಸಿ, ವಿಮರ್ಶಿಸಿ
ಮನಸೋ ಇಚ್ಛೆ ಟೀಕಿಸಿಕೊಂಡಿರಿ.
ಹೀಗೆ ಕೊಲ್ಲುವುದನ್ನೆ ಕಾಯಿದೆ
ಮಾಡುವುದಿದ್ದರೆ …
ಅಂದೇಕೆ ಆ ಹುಲಿಯಿಂದ
ನನ್ನನ್ನು  ರಕ್ಷಣೆ  ಮಾಡಿದಿರಿ? ?

‍ಲೇಖಕರು admin

27 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading